Wednesday, June 3, 2026
Homeಕರಾವಳಿಮಂಗಳೂರು: ಸುರತ್ಕಲ್ ನಲ್ಲಿ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಅನಾಹುತ; ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು

ಮಂಗಳೂರು: ಸುರತ್ಕಲ್ ನಲ್ಲಿ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಅನಾಹುತ; ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು

- Advertisement -
- Advertisement -

ಮಂಗಳೂರು: ಸುರತ್ಕಲ್ ನಲ್ಲಿ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಅನಾಹುತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ತಡಂಬೈಲ್‌ ವೆಂಕಟರಮಣ ಕಾಲೋನಿಯಲ್ಲಿ ನಡೆದಿದೆ.

ತಡಂಬೈಲ್‌ ವೆಂಕಟರಮಣ ಕಾಲೋನಿಯಲ್ಲಿ ಡಿಸೆಂಬರ್ 18 ರಂದು ಸಿಲಿಂಡರ್‌ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರು. ಅದರಲ್ಲಿ ಡಿಸೆಂಬರ್ 26 ರಂದು ಮನೆ ಯಜಮಾನ ವಾಮನ ಅವರ ಸಹೋದರಿ ಪುಷ್ಪಾ ಮೃತಪಟ್ಟಿದ್ದರೆ, ಶುಕ್ರವಾರ ಪತ್ನಿ ವಸಂತಿ ಸಾವನ್ನಪ್ಪಿದ್ದಾರೆ. ಕಳೆದ 9 ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು.

- Advertisement -

Latest News

error: Content is protected !!