ಮೂಡಬಿದರೆ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮೂಡಬಿದ್ರೆ ತಾಲೂಕು ಮೂಡುಕೊಣಾಜಿ ಗ್ರಾಮದ ಕೈಕಂಜಿ ಪಡು ಸೇತುವೆ ಬಳಿ ನಡೆದಿದೆ. ಬೆಳ್ತಂಗಡಿ ತಾಲೂಕು ಮದಡು ಕೂವೆಟ್ಟು ಗ್ರಾಮದ ಚಿಲಿಂಬಿ ನಿವಾಸಿ ಮೊಹಮ್ಮದ್ ರಫೀಕ್ (38) ಬಂಧಿತ.
ಆರೋಪಿ ದಿನಾಂಕ:26-12-2024 ರಂದು ಗಾಂಜಾವನ್ನು ಗಾಂಜ ವ್ಯಸನಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ . ಪೊಲೀಸರು ಆತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ತನ ವಶದಲ್ಲಿದ್ದ ಒಟ್ಟು 900 ಗ್ರಾಂ ತೂಕದ ಗಾಂಜಾವನ್ನು ಸ್ವಾಧೀನ ಪಡಿಸಿಕೊಂಡು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯಿಂದ ಸ್ವಾಧೀನ ಪಡಿಸಿಕೊಂಡ ಒಟ್ಟು 900ಗ್ರಾಂ ಗಾಂಜಾದ ಅಂದಾಜು ಮೌಲ್ಯ 22 ಸಾವಿರ ಎಂದು ಅಂದಾಜಿಸಲಾಗಿದೆ.
ಈತನ ವಿರುದ್ಧ ಚಿಕ್ಕಮಂಗಳೂರು ಜಿಲ್ಲೆಯಲ್ಲಿ 3 ಪ್ರಕರಣ ದಾಖಲಾಗಿದ್ದು ಅಲ್ಲದೇ ಬೆಳ್ತಂಗಡಿ ಠಾಣೆಯಲ್ಲಿ 3 ಗಾಂಜಾ ಮರಾಟ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿ ಇರುತ್ತದೆ.ಈ ಪ್ರಕರಣದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, ಮಾನ್ಯ DCP ಯವರಾದ ಶ್ರೀ ಸಿದ್ಧಾರ್ಥ ಗೊಯಲ್ IPS (ಕಾ&ಸು), ರವಿಶಂಕರ್ DCP (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಮಾನ ACP ಶ್ರೀ ಶೀಕಾಂತ್ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿಜಿ ರವರ ನೇತೃತ್ವದ ತಂಡ ಶ್ರೀ ಸಿದ್ದಪ್ಪ ನರನೂರ ಪೊಲೀಸ್ ಉಪ ನಿರೀಕ್ಷಕರು, ಹಾಗೂ ಎ ಎಸ್ ಐ ಪ್ರಶಾಂತ್, ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ರಾಲ್ ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್ ಮತ್ತು ರಾಜೇಶ್, ನಾಗರಾಜ ಲಮಾಣಿ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.


