Friday, June 5, 2026
Homeಕರಾವಳಿಸುಳ್ಯ: ಸಂಪಾಜೆಯಲ್ಲಿ ಮಹಿಳೆ ಆತ್ಮಹತ್ಯೆ

ಸುಳ್ಯ: ಸಂಪಾಜೆಯಲ್ಲಿ ಮಹಿಳೆ ಆತ್ಮಹತ್ಯೆ

- Advertisement -
- Advertisement -

ಸುಳ್ಯ:  ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇವರಾಜ್ ಎಂಬವರ ಪತ್ನಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ .

ದೇವರಾಜ್ ಅವರು ಮೈಸೂರಿನ ರಾಮನಾಥಪುರಂ ಎಂಬಲ್ಲಿ ಹೋಂಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಆ.5ರಂದು ಬೆಳಿಗ್ಗೆ ದೇವರಾಜ್ ಅವರು ಪತ್ನಿಗೆ ಫೋನ್ ಕರೆ ಮಾಡಿದಾಗ ಕರೆ ಸ್ವೀಕರಿಸುತ್ತಿಲ್ಲವೆನ್ನಲಾಗಿದೆ.  ಇದರಿಂದ ದೇವರಾಜ್ ಅವರು ಪಕ್ಕದ ಮನೆಗೆ ಫೋನ್ ಮಾಡಿದ್ದಾರೆ.ಪಕ್ಕದ ಮನೆಯವರು ಹೋಗಿ ಕಿಟಕಿ ಮೂಲಕ ನೋಡುವಾಗ ಲಕ್ಷ್ಮಿ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

- Advertisement -

Latest News

error: Content is protected !!