Thursday, June 4, 2026
Homeಕರಾವಳಿಧರ್ಮಸ್ಥಳದ ಜೋಡುಸ್ತಾನದಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಧರ್ಮಸ್ಥಳದ ಜೋಡುಸ್ತಾನದಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

- Advertisement -
- Advertisement -

ಧರ್ಮಸ್ಥಳ; ಗೃಹಿಣಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳದ ಜೋಡುಸ್ತಾನದಲ್ಲಿ ಇಂದು ನಡೆದಿದೆ. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ನಿವಾಸಿ ಪುಟ್ಟರಾಜು ಎಂಬವರ ಪತ್ನಿ ರೇಖಾ ಮೃತ ಮಹಿಳೆ.

ರೇಖಾ ತನ್ನ ಅಕ್ಕನ ಮಗಳ ಮದುವೆಗೆಂದು ಧರ್ಮಸ್ಥಳಕ್ಕೆ ಬಂದವರು, ಅಕ್ಕ ಭವಾನಿ ಅವರ ಮನೆಯಲ್ಲಿ ಉಳಿದುಕೊಂಡಿದ್ದರು.  ಈಕೆ ಇಂದು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈಕೆ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಮೃತರ ಅಕ್ಕ ನೀಡಿರುವ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!