- Advertisement -
![]()
- Advertisement -
ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಮಲ್ಲರ್ ಮಾಡಿ ನಿವಾಸಿ ಆಟೋ ಚಾಲಕ ಸದಾನಂದ (48) ರ ಮೃತದೇಹ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಇಂದು ಪತ್ತೆಯಾಗಿದೆ.
ಇವರು ನೇತ್ರಾವತಿಯಲ್ಲಿ ಆಟೋ ಚಾಲಕರಾಗಿದ್ದು ತನ್ನ ಆಟೋವನ್ನು ಬೆಳ್ತಂಗಡಿಯ ಶೋ ರೂಮ್ ನಲ್ಲಿ ನಿಲ್ಲಿಸಿದ್ದರು ಎನ್ನಲಾಗಿದೆ. ಯಾವುದೋ ಕಾರಣಕ್ಕೆ ಮಾನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಧರ್ಮಸ್ಥಳ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಇವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ
- Advertisement -


