Saturday, June 6, 2026
Homeಕರಾವಳಿಸುಳ್ಯ: ನಾಲ್ಕು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ: ಅದೃಷ್ಟವಶಾತ್ ಬದುಕುಳಿದ ಮಗು

ಸುಳ್ಯ: ನಾಲ್ಕು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ: ಅದೃಷ್ಟವಶಾತ್ ಬದುಕುಳಿದ ಮಗು

- Advertisement -
- Advertisement -

ಸುಳ್ಯ:ನಾಲ್ಕು ವರ್ಷದ ಮಗುವನ್ನು ಎತ್ತಿಕೊಂಡು ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಅದೃಷ್ಟವಶಾತ್ ಮಗು ಬದುಕುಳಿದ ಘಟನೆ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ‌ ನಡೆದಿದೆ‌.

ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಗೀತಾ ಮೃತಪಟ್ಟ ಮಹಿಳೆ. ಗೀತಾರವರು ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆ ಒಂದರಲ್ಲಿ ಗುಮಾಸ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು.‌ ಇಂದು ಮುಂಜಾನೆ ತನ್ನ ನಾಲ್ಕು ವರ್ಷದ ಮಗಳು ಪೂರ್ವಿಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂಜಾನೆ ಮನೆಯವರು ಎದ್ದಾಗ ಗೀತಾ ಮನೆಯಲ್ಲಿ ಇರದಿರುವುದನ್ನು ಕಂಡು ಹುಡುಕಾಡಿದಾಗ ಬಾವಿಯಲ್ಲಿ ಮಗಳು ಮತ್ತು ಪತ್ನಿ ಬಿದ್ದಿರುವುದು ಕಂಡುಬಂದಿದೆ. ಮಗಳು ಬಾವಿಯೊಳಗೆ ಇದ್ದ ಕಲ್ಲಿನ‍ ಸಹಾಯದಿಂದ ಬದುಕುಳಿದಿದ್ದು ಆಕೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೀತಾ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

Latest News

error: Content is protected !!