Wednesday, June 26, 2024
Homeಕರಾವಳಿಮಂಗಳೂರು ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಗ್ಲೌಸ್ ಕೊರತೆ; ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯನ್ನು ತರಾಟೆಗೆ...

ಮಂಗಳೂರು ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಗ್ಲೌಸ್ ಕೊರತೆ; ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ!

spot_img
- Advertisement -
- Advertisement -

ಮಂಗಳೂರು ;ಕೋವಿಡ್ 19 ಕುರಿತಂತೆ ನಗರದ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ವೇಳೆ ಮಾಸ್ಕ್ ಹಾಗೂ ಗ್ಲೌಸ್ ನ ಕೊರತೆಯಾಗಿರುವ ವಿಚಾರವನ್ನು ಪ್ರಸ್ತಾಪಿಸಿದ ವೇಳೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಗತ್ಯ ವಸ್ತುಗಳನ್ನು ದಾಸ್ತಾನು ಇಟ್ಟುಕೊಳ್ಳದೆ ನೌಕರರು ಕೆಲಸ ಮಾಡುವುದಾದರೂ ಹೇಗೆ, ನಿಮಗೆ ಎಲ್ಲಾ ಅಧಿಕಾರಗಳನ್ನು ಕೊಟ್ಟರೂ ಸಾಮಾನ್ಯ ಕೆಲಸ ಮಾಡಲು ನಿಮ್ಮಿಂದ ಆಗುವುದಿಲ್ಲ ಕೂಡಲೇ ಮಾಸ್ಕ್ ಖರೀದಿಸಿ ಎಂದು ತಾಕೀತು ಮಾಡಿದರು.

ಎನ್-95 ಮಾಸ್ಕ್ ಇಲ್ಲದೆ ಹೇಗೆ ಆಡಳಿತ ನಡೆಸುತ್ತೀರಾ? ನಿಮಗೆ ಅಷ್ಟೂ ಕಾಮನ್ ಸೆನ್ಸ್ ಇಲ್ವಾ ? ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದು,ಮಾಸ್ಕ್, ಗ್ಲೌಸ್ ಇಲ್ಲದೆ ನೀವು ಹೇಗೆ ಆಡಳಿತ ನಡೆಸುತ್ತೀರಾ, ಎಸ್ ಡಿಆರ್ ಎಫ್ ಫಂಡ್ ನಿಂದ ಇವತ್ತೇ ಖರೀದಿ ಮಾಡಿ. ನಿಮ್ಮ ಯಾವುದೇ ಸಮರ್ಥನೆ ನಂಗೆ ಬೇಡ, ಸಂಜೆಯೊಳಗೆ ನಂಗೆ ರಿಪೋರ್ಟ್ ಕೊಡಿ. ಬೆಂಗಳೂರು ಬಿಟ್ಟು ಎಲ್ಲವನ್ನೂ ಇಲ್ಲೇ ಖರೀದಿಸಿ ಸಂಜೆ ನನಗೆ ರಿಪೋರ್ಟ್ ಮಾಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ.

ಈ ವೇಳೆ ಜಿಲ್ಲಾ ಅರೋಗ್ಯ ಅಧಿಕಾರಿಯನ್ನು ಕೂಡಾ ತರಾಟೆಗೆ ತೆಗೆದುಕೊಂಡ ಸಿಎಂ ನೀನೇನು ನಿದ್ದೆ ಮಾಡ್ತಾ ಇದ್ದೀಯಾ? ಮಾಸ್ಕ್ ಕಡಿಮೆ ಇರುವ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ಯಾಕೆ ತರಲಿಲ್ಲ, ನಿಮಗೆ ಕೆಲಸ ಮಾಡುವ ಮನಸ್ಸು ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.

- Advertisement -
spot_img

Latest News

error: Content is protected !!