Wednesday, June 3, 2026
Homeತಾಜಾ ಸುದ್ದಿಸಂಬಳವಿಲ್ಲದೇ ಜೀವನ ನಡೆಸೋದಕ್ಕೆ ಪರದಾಡುತ್ತಿದ್ದಾರೆ ಸಾರಿಗೆ ನೌಕರರು: ಕಿಡ್ನಿ ಮಾರಾಟಕ್ಕೆ ಮುಂದಾದ ಬಸ್ ಕಂಡಕ್ಟರ್..

ಸಂಬಳವಿಲ್ಲದೇ ಜೀವನ ನಡೆಸೋದಕ್ಕೆ ಪರದಾಡುತ್ತಿದ್ದಾರೆ ಸಾರಿಗೆ ನೌಕರರು: ಕಿಡ್ನಿ ಮಾರಾಟಕ್ಕೆ ಮುಂದಾದ ಬಸ್ ಕಂಡಕ್ಟರ್..

- Advertisement -
- Advertisement -

ಕೊಪ್ಪಳ: ಕೊರೊನಾದಿಂದಾಗಿ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಸಂಬಳ ಸರಿಯಾಗಿ ಬರ್ತಿಲ್ಲ ಅಂತಾ ಈಗಾಗಲೇ ಸಾರಿಗೆ ನೌಕರರು ಪ್ರತಿಭಟನೆ ಕೂಡ ನಡೆಸಿದ್ರು. ಇದೀಗ ಮತ್ತೆ ಪ್ರತಿಭಟನೆಗೂ ಮುಂದಾಗಿದ್ದಾರೆ. ಹೀಗಿರುವಾಗ ಕೊಪ್ಪಳದಲ್ಲಿ ದಿನನಿತ್ಯದ ಜೀವನ ನಡೆಸಲು ಕಷ್ಟವಾಗ್ತಿದೆ ಅಂತಾ ಬಸ್ ಕಂಡಕ್ಟರ್ ಒಬ್ಬರು ತಮ್ಮ ಕಿಡ್ನಿ  ಮಾರೋದಕ್ಕೆ ಮುಂದಾಗಿದ್ದಾರೆ,

ಹೌದು,,, ಕೊಪ್ಪಳ ಜಿಲ್ಲೆ ಗಂಗಾವತಿ ಡಿಪೋದಲ್ಲಿ ಕಂಡಕ್ಟರ್​ ಆಗಿ ಕೆಲಸ ಮಾಡುತ್ತಿರುವ ಕುಷ್ಟಗಿ ಮೂಲದ ಹನುಮಂತಪ್ಪ ಎಂಬವರು ಸಂಬಳವಿಲ್ಲದೇ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ತಮ್ಮ ಫೇಸ್​ಬುಕ್​ ಅಕೌಂಟ್ ನಲ್ಲಿ  ನೋವು ತೋಡಿಕೊಂಡಿದ್ದಾರೆ.

ನಾನು ಒಬ್ಬ ಸಾರಿಗೆ ನೌಕರ. ಮನೆ ಬಾಡಿಗೆ ಕಟ್ಟಲು ಮತ್ತು ರೇಷನ್​ ತರುವುದಕ್ಕೂ ಸಹ ನನ್ನ ಬಳಿ ಹಣವಿಲ್ಲ. ನನ್ನ ಕಿಡ್ನಿ ಮಾರಾಟಕ್ಕಿವೆ ಎಂದು ಫೇಸ್​​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರೊಂದಿಗೆ ಫೋನ್​ ನಂಬರ್​ ಸಹ ಬರೆದಿದ್ದಾರೆ. ಈ ಮೂಲಕ ಸರ್ಕಾರದ ಹನುಮಂತಪ್ಪ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

- Advertisement -

Latest News

error: Content is protected !!