Wednesday, June 3, 2026
Homeಕರಾವಳಿಉಡುಪಿಐನೆಕಿದು: ಕೆಸರಲ್ಲಿ ಹೂತುಹೋದ ಕೆಎಸ್‌ಆರ್‌ಟಿಸಿ ಬಸ್

ಐನೆಕಿದು: ಕೆಸರಲ್ಲಿ ಹೂತುಹೋದ ಕೆಎಸ್‌ಆರ್‌ಟಿಸಿ ಬಸ್

- Advertisement -
- Advertisement -

ಐನೆಕಿದು: ಸರಕಾರಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಹದಗೆಟ್ಟ ರಸ್ತೆಯೊಂದರಲ್ಲಿ ಕೆಸರಲ್ಲಿ ಹೂತು ಹೋಗಿ ಸಂಕಷ್ಟ ಅನುಭವಿಸಿದ ಘಟನೆ ಕಡಬ ತಾಲೂಕಿನ ಐನೆಕಿದು ಎಂಬಲ್ಲಿ ನಡೆದಿದೆ.

ಐನೆಕಿದು-ಕೋಟೆ ಸಂಪರ್ಕ ರಸ್ತೆಯ ಕೋಟೆಯಡ್ಕ ಎಂಬಲ್ಲಿ ಘಟನೆ ನಡೆದಿದೆ. ಸಂಜೆ ತೆರಳುವ ಬಸ್ ರಸ್ತೆಯ ಕೆಸರಲ್ಲಿ ಹೂತು ಬಾಕಿಯಾಗಿದೆ. ಬಳಿಕ ಬಸ್ಸಲ್ಲಿದ್ದವರು ಇಳಿದು ತೆರಳಿದ್ದಾರೆ.

ಬಸ್‌ನ್ನು ಮೇಲಕ್ಕೆತ್ತಿ ತೆರವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೇ ರಸ್ತೆಯಲ್ಲಿ ಕಳೆದ ವರ್ಷವೂ ಸರಕಾರಿ ಬಸ್ ಬಾಕಿಯಾಗಿ ಸಂಕಷ್ಟ ಅನುಭವಿಸಿತ್ತು ಎನ್ನಲಾಗಿದೆ.

- Advertisement -

Latest News

error: Content is protected !!