Friday, June 5, 2026
Homeಕರಾವಳಿಬೆಳ್ತಂಗಡಿ: ಚರಂಡಿಗೆ ಉರುಳಿದ ಕೆ.ಎಸ್.ಆರ್.ಟಿ.ಸಿ.ಬಸ್; ಪ್ರಯಾಣಿಕರು ಅಪಾಯದಿಂದ ಪಾರು

ಬೆಳ್ತಂಗಡಿ: ಚರಂಡಿಗೆ ಉರುಳಿದ ಕೆ.ಎಸ್.ಆರ್.ಟಿ.ಸಿ.ಬಸ್; ಪ್ರಯಾಣಿಕರು ಅಪಾಯದಿಂದ ಪಾರು

- Advertisement -
- Advertisement -

ಬೆಳ್ತಂಗಡಿ: ಸುಬ್ರಮಣ್ಯದಿಂದ ಧರ್ಮಸ್ಥಳ ಮೂಲಕ ಗೋಕರ್ಣಕ್ಕೆ ತೆರಳುವ ಕೆಎಸ್ ಆರ್ ಟಿ ಸಿ ಬಸ್ ಒಂದು ಕಾರಿಗೆ ಸೈಡ್ ಕೊಡುವ ವೇಳೆ ಚರಂಡಿಗೆ ಉರುಳಿದ ಘಟನೆ ನಿಡ್ಲೆಕೆರೆಕಂಡ ಎಂಬಲ್ಲಿ ಇಂದು ಮದ್ಯಾಹ್ನ ಸಂಭವಿಸಿದೆ.


ಘಟನೆಯಲ್ಲಿ ಅದೃಷ್ಟವಶಾತ್ ಪ್ರಯಾಣಿಕರು ಯಾರಿಗೂ ಗಾಯವಾಗಿಲ್ಲಎಂದು ತಿಳಿದುಬಂದಿದೆ. ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ರಾಂಗ್ ಸೈಡಿನಿಂದ ಬಂದಿರುವುದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.


ರಸ್ತೆ ಬದಿಗೆ ಸರಿದ ಬಸ್ ಚರಂಡಿ ಇಳಿದು ಅವಘಡ ಸಂಭವಿಸಿದೆ. ಈ ಬೇಳೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು ಎನ್ನಲಾಗಿದೆ.

- Advertisement -

Latest News

error: Content is protected !!