Friday, May 17, 2024
Homeಕರಾವಳಿಬೆಳ್ತಂಗಡಿ ಕಾಂಗ್ರೆಸ್ ಪಕ್ಷದೊಳಗೆ 'ಮೂರು ಬಾಗಿಲು' ಹಿನ್ನಲೆ: ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗೆ ಕರೆ ಮಾಡಿ...

ಬೆಳ್ತಂಗಡಿ ಕಾಂಗ್ರೆಸ್ ಪಕ್ಷದೊಳಗೆ ‘ಮೂರು ಬಾಗಿಲು’ ಹಿನ್ನಲೆ: ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಡಿಕೆಶಿ: ಭಾನುವಾರ ಪಕ್ಷದ ಮುಖಂಡರೊಂದಿಗೆ ಗೌಪ್ಯ ಸಭೆ

spot_img
- Advertisement -
- Advertisement -

ಬೆಳ್ತಂಗಡಿ : ವಿಧಾನ ಸಭೆ ಚುನಾವಣಾ ಹತ್ತಿರ ಬರುತ್ತಿದ್ದಂತೆ ರಾಜಕೀಯದಲ್ಲಿ ಅಭ್ಯರ್ಥಿಗಳ ಸ್ಪರ್ಧೆಗಾಗಿ ಹಿರಿಯರು-ಕಿರಿಯರ ನಡುವೆ ಬಣ ರಾಜಕೀಯ ಜೋರಾಗಿದ್ದು ಅದರಲ್ಲಿಯೂ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದೊಳಗೆ ಮನೆಯೊಂದು ಬಾಗಿಲು ಎಂಬಂತೆ ಆಗಿದೆ.

ಬೆಳ್ತಂಗಡಿ ಕಾಂಗ್ರೆಸ್ ನಲ್ಲಿ 2023 ರ ವಿಧಾನ ಸಭೆಯ ಚುನಾವಣೆಗೆ ಮೂವರು ಅಭ್ಯರ್ಥಿಗಳ ನಡುವೆ ಬಣ ರಾಜಕೀಯ ಶುರುವಾಗಿದ್ದು. ಮಾಜಿ ಶಾಸಕ ಕೆ.ವಸಂತ ಬಂಗೇರ , ಮಾಜಿ ಸಚಿವ ಗಂಗಾಧರ್ ಗೌಡ , ಯುವ ನಾಯಕ ರಕ್ಷಿತ್ ಶಿವರಾಂ ಚುನಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಕಥೆಯಾಗಿ ಬಣ ರಾಜಕೀಯ ಶುರುವಾಗಿ ಒಬ್ಬರಿಗೊಬ್ಬರು ಮಾಧ್ಯಮಗಳ ಮೂಲಕ ಬೈದಾಡಿಕೊಳ್ಳುವವರೆಗೆ ಮುಂದುವರಿದಿದ್ದು ಈ ಬಗ್ಗೆ ಕೆಪಿಸಿಸಿ ಜಿಲ್ಲಾಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಹಿತಿ ತಿಳಿದುಕೊಂಡು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಾಗೂ ಎಮ್.ಎಲ್.ಸಿ ಹರೀಶ್ ಕುಮಾರ್ ಗೆ ಶುಕ್ರವಾರ ಕರೆ ಮಾಡಿ ತರಾಟೆಗೆ ತೆಗೆದುಕೊಂಡು ಪಕ್ಷದ ಗೊಂದಲವನ್ನು ಸರಿಪಡಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಭಾನುವಾರ ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿ ಹೊಂದಿರುವ ಮುಖಂಡರುಗಳೊಂದಿಗೆ ಸಭೆ ಮಾಡಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಜಿಲ್ಲಾಧ್ಯಕ್ಷರೊಂದಿಗೆ ಸಭೆ ನಡೆಯುವ ಮಾಹಿತಿ ಇದೆ. ಈ ಸಭೆಯಲ್ಲಿ ಮತ್ತಷ್ಟು ಗೊಂದಲಗಳು ಹಾಗೂ ಚರ್ಚೆಗಳು ನಡೆಯುವ ಸಾಧ್ಯತೆಗಳು ಇದೆ ಎನ್ನಲಾಗಿದೆ.

ಕೆಪಿಸಿಸಿ ರಾಜ್ಯಾದ್ಯಕ್ಷರಿಂದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗೆ ಕರೆ ಮಾಡಿ ತರಾಟೆ : ಬೆಳ್ತಂಗಡಿಯ ಮೂರು ಬಣಗಳ ಬಗ್ಗೆ ಮಾಹಿತಿ ತಿಳಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೇರವಾಗಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಾಗೂ ಎಮ್.ಎಲ್.ಸಿ ಹರೀಶ್ ಕುಮಾರ್ ಗೆ ಶುಕ್ರವಾರ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಮೊದಲು ಪಕ್ಷದ ಜವಾಬ್ದಾರಿ ಇರುವ ಮುಖಂಡರನ್ನು ಒಟ್ಟು ಸೇರಿಸಿ ಸಭೆ ನಡೆಸಿ ಪಕ್ಷವನ್ನು ಒಂದು ಮಾಡಿ ಯಾರಿಗೆ ಪಕ್ಷ ಚುನಾವಣೆಗೆ ಸೀಟ್ ನೀಡುತ್ತಾರೆ. ಅವರಿಗಾಗಿ ಒಗ್ಗಟ್ಟಾಗಿ ಕಾರ್ಯಕರ್ತರು ಕೆಲಸ ಮಾಡಿ ಪಕ್ಷವನ್ನು ಬಲಪಡಿಸಬೇಕೆಂದು ಸೂಚನೆ ನೀಡಿದೆ. ಈ ವೇಳೆ ಹರೀಶ್ ಕುಮಾರ್ ನಾನು ಬೆಳ್ತಂಗಡಿ ರಾಜಕೀಯ ವಿಚಾರದಲ್ಲಿ ಇಲ್ಲ ಎಂದಿದ್ದಕ್ಕೆ ಇದಕ್ಕೆ ಡಿಕೆಶಿ ಗರಂ ಆಗಿ ನೀನು ಜಿಲ್ಲಾಧ್ಯಕ್ಷ ಯಾಕಾಗಿ ಇರುವುದು? ನಿನ್ನ ಕ್ಷೇತ್ರದಲ್ಲಿ ನಿನಗೆ ಪಕ್ಷವನ್ನು ಸರಿಮಾಡಲು ಅಗದಿದ್ರೆ ಯಾಕೆ ಜವಾಬ್ದಾರಿ ಪಡೆದುಕೊಂಡದ್ದು ಮೊದಲು ಸಭೆ ಮಾಡಿ ಒಗ್ಗಟ್ಟು ಮಾಡುವುದು ನಿನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಈ ಸಭೆಗೆ 30 ಮಂದಿಯನ್ನು ಕರೆದು ಮಾತಾನಾಡುತ್ತೇನೆ ಎಂದು ಹರೀಶ್ ಕುಮಾರ್ ಉತ್ತರಿಸಿದ್ದು ,ಇದಕ್ಕೆ ನೀನು 30 ಜನರನ್ನು ನಿನ್ನ‌ ಮನೆಯಲ್ಲಿ ಸಭೆ ಮಾಡು ಅಂತ ಗರಂ ಆಗಿದ್ದಾರೆ ರಾಜ್ಯಾಧ್ಯಕ್ಷರು. ಅದಲ್ಲದೆ ಈ ಸಭೆಗೆ ವಸಂತ ಬಂಗೇರ , ಗಂಗಾಧರ ಗೌಡ , ರಕ್ಷಿತ್ ಶಿವರಾಂ ಅವರನ್ನು ಕರೆಯಬಾರದು ಎಂದು ಸೂಚಿಸಿದ್ದಾರೆ. ಪಕ್ಷದಲ್ಲಿ ಜವಾಬ್ದಾರಿ ಇರುವ 100 ಮಂದಿ ಮುಖಂಡರನ್ನು ಕರೆದು ಬಣ ರಾಜಕೀಯವನ್ನು ನಿಲ್ಲಿಸಿ ಗೊಂದಲ ಸರಿಮಾಡಬೇಕು. ಈ ಭಾರಿಯ ಚುನಾವಣೆಯಲ್ಲಿ ಯುವಕರಿಗೆ ಮೊದಲ ಆದ್ಯತೆ ನೀಡಲಾಗುವುದು. ವಸಂತ ಬಂಗೇರ ಮತ್ತು ಗಂಗಾಧರ್ ಗೌಡರು ಹಿರಿಯರು ಅವರು ರಾಜಕೀಯ ಮಾಡಿದ್ದು ಸಾಕು ಅವರು ಅನೇಕ ಭಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇನ್ನೂ ಹೊಸ ಮುಖ  ರಕ್ಷಿತ್ ಶಿವರಾಂಗೆ ಟಿಕೆಟ್ ಹೈಕಮಾಂಡ್ ನಿಂದ ನೀಡಲಾಗುವುದು ಎಂದು ಖಚಿತವಾಗಿದೆ. ಅವನಿಗಾಗಿ ಪಕ್ಷದವರೆಲ್ಲರು ಕೆಲಸ ಮಾಡಬೇಕು. ಅದಲ್ಲದೆ ಬಣರಾಜಕೀಯ ಮಾಡವವರಿಗೆ ಸರಿಯಾಗಿ ವಾರ್ನಿಂಗ್ ನೀಡಿ ಗೊಂದಲ ಸರಿಪಡಿಸಬೇಕೆಂದು ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ನ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

- Advertisement -
spot_img

Latest News

error: Content is protected !!