Thursday, April 25, 2024
Homeಕರಾವಳಿಕೊಟ್ಟಿಗೆಹಾರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬೆಳ್ತಂಗಡಿ ಮೂಲದ ಮೂವರ ಬಂಧನ

ಕೊಟ್ಟಿಗೆಹಾರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬೆಳ್ತಂಗಡಿ ಮೂಲದ ಮೂವರ ಬಂಧನ

spot_img
- Advertisement -
- Advertisement -

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದ ಬಳಿ ಇರುವ ಚೌಡೇಶ್ವರಿ ದೇವಸ್ಥಾನ ರಸ್ತೆ ತರುವೆ ಗ್ರಾಮದ ಹತ್ತಿರ ಬೈಕಿನಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬೆಳ್ತಂಗಡಿ ತಾಲೂಕಿನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮೇಲಿನ ಕುಂಟಿಯಾನ ನಿವಾಸಿ ಮುಸ್ತಾಫ, ಚಾರ್ಮಾಡಿ ಗ್ರಾಮದ ಗಾಂಧಿನಗರ ನಿವಾಸಿ ಉಮ್ಮರುಲ್ ಫಾರೂಕ್ ಮತ್ತು ಚಾರ್ಮಾಡಿ ಗ್ರಾಮದ ಗಾಂಧಿನಗರ ನಿವಾಸಿ ಮಹಮ್ಮದ್ ನೌಶದ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ ಸುಮಾರು,50,000, ರೂ ಬೆಲೆ ಬಾಳುವ 2 ಕೆಜಿ ಗಾಂಜಾ ¸ಸೊಪ್ಪುನ್ನು ಹಾಗೂ ಆರೋಪಿತರುಗಳು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಬಳಸುತ್ತಿದ್ದ K.A. 21 EA. 4584 ನೇ ನೊಂದಣಿ ಸಂಖ್ಯೆ ಹೊಂದಿರುವ ಗ್ರೇ ಕಲರ್ ನ ಹೊಂಡಾ ಡಿಯೋ ಸ್ಕೂಟರ್ ನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳು ಗಾಂಜಾವನ್ನು ಕಾಸರಗೋಡು ಬಳಿಯ ಮೇಪದವು ಮೂಲದ ರಹೀಂ ಎಂಬುವನಿಂದ ಖರೀದಿಸಿ ತಂದು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವುದಾಗಿ ತನಿಖೆಯ ವೇಳೆ ಬಂದಿದೆ. ಸಿ.ಇ,ಎನ್ ಪೊಲೀಸ್ ಠಾಣೆಯಲ್ಲಿ ಆರೋಪಿತರುಗಳ ವಿರುದ್ದ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ.ಹೆಚ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಿ ಶೃತಿ ಎನ್.ಎಸ್ ರವರ ಮಾರ್ಗದರ್ಶನದಂತೆ ಕಾರ್ಯಾಚರಣೆಯಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಉಪ-ನಿರೀಕ್ಷಕಿ ಶ್ರೀಮತಿ ರಮ್ಯ ಎನ್.ಕೆ ಮತ್ತು ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಲೋಕೇಶ್,ಸಿ., ಲೋಕೇಶ್, ಕೆ.ಹೆಚ್. ಇಮ್ರಾನ್ ಖಾನ್, ಎಸ್.ಜೆ, ಹೆಚ್.ಆರ್. ಮುಖ್ರಿಂಬೇಗ್, ಮಹೇಶ್ ಕೆ.ಬಿ, ಅನ್ವರ್ ಪಾಷಾ, ಹರೀಶ್. ಬಿ.ಸಿ., , ಚಾಲಕರಾದ ಶ್ರೀ. ಪೂರ್ಣೇಶ್. ಶ್ರೀ. ಎಸ್. ಎಂ. ರವಿ ರವರು ಹಾಗೂ ಪತ್ರಾಂಕಿತ ಅಧಿಕಾರಿಯವರಾದ ಶ್ರೀ. ಎಂ.ಸಿ. ಪ್ರದೀಪ್ ಅಬಕಾರಿ ಉಪಾಧೀಕ್ಷಕರು ಚಿಕ್ಕಮಗಳೂರು, ಅಬಕಾರಿ ಇಲಾಖೆಯ ನೌಕರರುಗಳಾದ ಶ್ರೀ. ಖಾಂಡ್ಯನಾಯ್ಕ ಮತ್ತು ಶ್ರೀ.ಮಂಜುನಾಥ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!