Tuesday, June 9, 2026
Homeಕರಾವಳಿಮಂಗಳೂರುಮಂಗಳೂರು; ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಆಸ್ಪತ್ರೆಯಿಂದ ಜೈಲಿಗೆ ಶಿಫ್ಟ್

ಮಂಗಳೂರು; ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಆಸ್ಪತ್ರೆಯಿಂದ ಜೈಲಿಗೆ ಶಿಫ್ಟ್

- Advertisement -
- Advertisement -

ಮಂಗಳೂರು; ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಮುರುಗಂಡಿ ಆಸ್ಪತ್ರೆಯಿಂದ ಜೈಲಿಗೆ ಶಿಫ್ಟ್ ಆಗಿದ್ದಾನೆ.

 ಶೂಟೌಟ್‌ನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರೋಡೆಯ ಪ್ರಮುಖ ಆರೋಪಿ ಮುರುಗಂಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಆತನನ್ನು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಇತರ ನಾಲ್ವರು ಆರೋಪಿಗಳು ಈಗಾಗಲೇ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ದರೋಡೆ ಕೃತ್ಯದಲ್ಲಿ ಭಾಗವಹಿಸಿದ ಸೂತ್ರಧಾರ ಮತ್ತು ಸ್ಥಳೀಯ ಮಾಹಿತಿ ಹೊಂದಿದ್ದ ಶಶಿ ಥೇವರ್‌ ಸೇರಿದಂತೆ ಇತರ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡ ಮುಂಬಯಿ ಮತ್ತು ಇಂದೋರ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆ ನಡೆದ ಒಂದೇ ವಾರದಲ್ಲಿ ಪ್ರಮುಖ ಮೂವರು ಆರೋಪಿಗಳು ಮತ್ತು ದರೋಡೆ ನಡೆಸಿದ ಸೊತ್ತುಗಳನ್ನು ವಶಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೂ ಸ್ಥಳೀಯವಾಗಿ ಸಂಪರ್ಕ ಸೇತುವಾಗಿದ್ದ ಆರೋಪಿಗಳ ಪತ್ತೆ ಕಾರ್ಯ ಇನ್ನೂ ಆಗಿಲ್ಲ. ಸ್ಥಳೀಯ ವ್ಯಕ್ತಿ ಶಶಿ ಥೇವ‌ರ್ ಎಂದು ಮುರುಗಂಡಿ ಮಾಹಿತಿ ನೀಡಿದ್ದರೂ ಆತನನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈತ ಭೂಗತನಾಗಿದ್ದು, ಆಗಾಗ ತಾಣ ಬದಲಾಯಿಸುತ್ತಿರುವುದರಿಂದ ಆತನ ನೆರೆಗಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

- Advertisement -

Latest News

error: Content is protected !!