Thursday, May 2, 2024
Homeಕರಾವಳಿಬೆಳ್ತಂಗಡಿ  : ಶಿಶಿಲದಲ್ಲಿ ಕೊರಗಜ್ಜನ ಬಗ್ಗೆ ಅಪಪ್ರಚಾರ ಮಾಡಿದ ಪ್ರಕರಣ : "ರೋಡ್ ರೋಡ್ ಬಲ್ಪಿಲೆಕ...

ಬೆಳ್ತಂಗಡಿ  : ಶಿಶಿಲದಲ್ಲಿ ಕೊರಗಜ್ಜನ ಬಗ್ಗೆ ಅಪಪ್ರಚಾರ ಮಾಡಿದ ಪ್ರಕರಣ : “ರೋಡ್ ರೋಡ್ ಬಲ್ಪಿಲೆಕ ಮಲ್ಪುದ್ ನಿಕ್ಲೆಗ್ ಸೂಚನೆ ಕೊರ್ಪವೆ ” :ಅಪಪ್ರಚಾರ ಮಾಡಿದವರಿಗೆ ಕೊರಗಜ್ಜ ಕೊಟ್ಟನೇ ತಕ್ಕ ಶಿಕ್ಷೆ..?

spot_img
- Advertisement -
- Advertisement -

ಬೆಳ್ತಂಗಡಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ ಎಂತಹದ್ದು ಅನ್ನೋದು ಪದೇ ಪದೇ ಸಾಬೀತಾಗುತ್ತಲೇ ಇದೆ, ಅಲ್ಲದೇ ಕೊರಗಜ್ಜನಿಗೆ ಅಪಮಾನ ಮಾಡಿದವರಿಗೆ ತಕ್ಕ ಶಿಕ್ಷೆಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇದೀಗ ಇಂತಹದ್ದೇ ಮಾತುಗಳು ಬೆಳ್ತಂಗಡಿ ತಾಲೂಕಿನ ಶಿಶಿಲ ಪರಿಸರದಲ್ಲಿ ಕೇಳಿ ಬರುತ್ತಿದೆ.ಕಳೆದ ಆರು ತಿಂಗಳ ಹಿಂದೆ ಕೆಲವು ಕಾಣದ “ಕೈ” ಗಳು ಸೇರಿ ಕಾರೆಗುಡ್ಡೆ ಕೊರಗಜ್ಜನ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದರು. ಇದೀಗ ಅವರಿಗೆ ತಕ್ಕ ಪಾಠ ಕಲಿಸಿದ್ದಾನೆ ಕೊರಗಜ್ಜ.

ಹೌದು.. 2022 ರ ಜನವರಿ 11 ರಂದು ದಿನ ಪತ್ರಿಕೆಯೊಂದರಲ್ಲಿ ಬೆಳ್ತಂಗಡಿ ತಾಲೂಕಿನ ಶಿಶಿಲದ ಕಾರೆಗುಡ್ಡೆ ಕೊರಗಜ್ಜನ ಬಗ್ಗೆ “ದಲಿತನಿಗೆ ಕೊರಗಜ್ಜನ ವೇಷ ಹಾಕಿಸಿ ಗ್ರಾ.ಪಂ ಪ್ರಮುಖನಿಂದ ನಿರಾತಂಕ ದಂಧೆ! ” ಎಂಬ ಶೀರ್ಷಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟ ಮಾಡಲಾಗಿತ್ತು. ನಂತರ ವರದಿಯ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಈ ಬಗ್ಗೆ ಕೊರಗಜ್ಜನ ಭಕ್ತರಿಗೆ ತುಂಬಾ ನೋವುಂಟಾಗಿದ್ದು ದಿನಾಂಕ 13-01-2022 ರಂದು ಕೊರಗಜ್ಜನ ಅಪಪ್ರಚಾರದ ಬಗ್ಗೆ ಕೊರಗಜ್ಜನ ಸೇವೆ ಮಾಡುವವರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು. ನಂತರ ದಿನಾಂಕ 14-01-2022 ರಂದು ಕೊರಗಜ್ಜನ ಭಕ್ತರು ಸೇರಿ ಶ್ರೀ ಶಿಶಿಲೇಶ್ವರ ದೇವಸ್ಥಾನದಿಂದ ಕಾರೆಗುಡ್ಡೆ ಕೊರಗಜ್ಜನ ಸನ್ನಿಧಾನಕ್ಕೆ ಕಾಲ್ನಡಿಗೆ ಜಾಥಾ ಮೂಲಕ ಬಂದು ಅಪಪ್ರಚಾರ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.

ಕೊರಗಜ್ಜ ನುಡಿದಂತೆ ಅಪಪ್ರಚಾರ ಮಾಡಿದವರಿಗೆ ಶಿಕ್ಷೆ ಕೊಟ್ಟ : ದಿನಾಂಕ 14-01-2022 ರಂದು ಸಾಮೂಹಿಕ ಪ್ರಾರ್ಥನೆ ನಂತರ ನಡೆದ ಕೊರಗಜ್ಜನ ನುಡಿಯಲ್ಲಿ “ನೆಟ್ಟ್ ಈ ಊರುದಾ ನರಮಾನಿಲೆನಾ ಕೈವಾಡ ಉಂಡು ಈ ರೀತಿ ಎರ್ ಮಲ್ತೆರೊ ಅಕುಲೆನ್ ಮರ್ಲ್ ಪತ್ತಾದ್ ರೋಡ್ ರೋಡ್ ಬಲ್ಪಿಲೆಕಾ ಮಲ್ಪುದ್ ನಿಕ್ಲೆಕ್‌‌ ಸೂಚನೆ ಕೊರ್ಪವೆ ” ಎಂದು ನುಡಿ ಹೇಳಿದ್ದರು . ಇದೀಗ ಅದರಂತೆ ಅಪಪ್ರಚಾರ ಮಾಡಿದ ಕಾಂಗ್ರೆಸ್ ಕಾರ್ಯಕರ್ತರಿಬ್ಬರು ರಸ್ತೆಯಲ್ಲಿ ಆರು ತಿಂಗಳ ಒಳಗೆ ಎರಡು ಎರಡು ಬಾರಿ ಹುಚ್ಚರಂತೆ ಗಲಾಟೆ ಮಾಡಿಕೊಂಡಿದ್ದಾರೆ. ಅದರಂತೆ ಕೊರಗಜ್ಜ ನುಡಿದ ಮಾತು ನಿಜವಾಗಿದೆ.

ನಡು ರಸ್ತೆಯಲ್ಲೇ ಎರಡು ಬಾರಿ ಹೊಡೆದಾಡಿಕೊಂಡ ಕಾಂಗ್ರೆಸ್ ಕಾರ್ಯಕರ್ತರು : ಜೂನ್ 8 ರಂದು ಶಿಶಿಲ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಬ್ಬರು ದನದ ವಿಚಾರವಾಗಿ ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ರಾತ್ರಿ ಹೊಡೆದಾಡಿಕೊಂಡಿದ್ದರು. ಇದೇ ರಿವೇಂಜ್ ತೀರಿಸಲು ಜೂನ್ 29 ರಂದು ಸಂಜೆ ಮತ್ತೆ ಇನ್ನೊಬ್ಬನ ಮೇಲೆ  ಮಾರಣಾಂತಿಕ  ಹಲ್ಲೆ ಮಾಡಲಾಗಿತ್ತು.  ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದರು. ಇದೀಗ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಅಗಿದ್ದಾರೆ. ‌.

ಕೊರಗಜ್ಜನ ಬಗ್ಗೆ ಅಪಪ್ರಚಾರ: ಕೊರಗಜ್ಜನ ಬಗ್ಗೆ ಅಪಪ್ರಚಾರ ಮಾಡಿದ ಪ್ರಕರಣದಲ್ಲಿ ಒಟ್ಟು ಆರು ಜನ ಇದ್ದರು ಎನ್ನಲಾಗಿದೆ. ಇದರಲ್ಲಿ ಈ ಇಬ್ಬರು ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಲೇಟರ್ ನಲ್ಲಿ ತಮ್ಮ ಹೆಸರು ವಿಳಾಸ ಜೊತೆಗೆ ಸಹಿ ಹಾಕಿ ದೂರು‌ ನೀಡಿದ್ದರು. ಅದಲ್ಲದೆ ಪತ್ರಿಕೆಯಲ್ಲಿ ಬಂದ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು..

ಕಾರೆಗುಡ್ಡೆ ಕೊರಗಜ್ಜನ ಮಹಿಮೆ: ಶಿಶಿಲದ ಕಾರೆಗುಡ್ಡೆ ಗಣೇಶ್ ಮುಗೇರ ಎಂಬವರ ಜಮೀನಿನಲ್ಲಿ‌‌ ಕಳೆದ ನಾಲ್ಕು ವರ್ಷಗಳಿಂದ ಕೊರಗಜ್ಜನ ಕಟ್ಟೆಯನ್ನು ನಿರ್ಮಿಸಿ ಜೀರ್ಣೋದ್ಧಾರ ಮಾಡಿ ಪೂಜಿಸಲಾಗುತ್ತಿದೆ.‌. ಪೂರ್ವಜರು ನಂಬಿಕೊಂಡು ಬಂದಿರುವ ದೈವವಾಗಿದ್ದು ಸಂಕಾಂತ್ರಿಯ ಅಗೇಲು ಸೇವೆ ಕೂಡ ಮಾಡಲಾಗುತ್ತಿದೆ. ಸಂಕ್ರಾಂತಿಯ ದಿನದಂದು ಸ್ಥಳೀಯರಿಗೆ ಸಮಸ್ಯೆ ಬಂದಲ್ಲಿ ಕೊರಗಜ್ಜನ ಮೊರೆ ಹೋಗುತ್ತಾರೆ . ಇದರಿಂದ ಎಷ್ಟೋ ಜನರ ಕಷ್ಟ ನಿವಾರಣೆಗಳು ಆಗುತ್ತಿದೆ. ಸ್ಥಳೀಯರು ಹೇಳಿದ ಹರಕೆಯನ್ನು ಅವರ ಸಮ್ಮುಖದಲ್ಲಿ ಸಲ್ಲಿಸಲಾಗುತ್ತದೆ. ತಂತ್ರಿಯವರ ಸಲಹೆಯಂತೆ ಗಣೇಶ್ ಎಂಬವರು ದರುಶನ ನೀಡುತ್ತಾ ಬಂದಿರುತ್ತಾರೆ. ಕೊರಗಜ್ಜನ ಸನ್ನಿಧಾನಕ್ಕೆ ಸ್ವಯಂ ಸೇವಕರಾಗಿ ಊರಿನ ಹಲವು ಮಂದಿ ಬರುತ್ತಾರೆ. ಸಂದೀಪ್ ಗೌಡ ಇವರ ತಂದೆ ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗುವ ಮೊದಲೇ ಸನ್ನಿಧಾನದಲ್ಲಿ ಸೇವೆ ಮಾಡುತ್ತಾ ಬಂದಿರುತ್ತಾರೆ.

- Advertisement -
spot_img

Latest News

error: Content is protected !!