Monday, May 6, 2024
Homeತಾಜಾ ಸುದ್ದಿಮನೆಯೊಡತಿಯನ್ನೇ ಕಚ್ಚಿ ಕೊಂದ ಸಾಕು ನಾಯಿ

ಮನೆಯೊಡತಿಯನ್ನೇ ಕಚ್ಚಿ ಕೊಂದ ಸಾಕು ನಾಯಿ

spot_img
- Advertisement -
- Advertisement -

ಲಕ್ನೋ:  ಮನೆಯೊಡತಿಯನ್ನು ಸಾಕು ನಾಯಿಯೊಂದು ಕಚ್ಚಿ ಕೊಂದು ಹಾಕಿದ ಘಟನೆ  ಲಕ್ನೋದಲ್ಲಿ ನಡೆದಿದೆ. ಕೈಸರ್ ಭಾಗ್ ನಿವಾಸಿ ಸುಶೀಲಾ ತ್ರಿಪಾಠಿ(82) ಮೃತಪಟ್ಟ ದುರ್ದೈವಿ.

ಜಿಮ್ ಟ್ರೈನರ್ ಆಗಿರುವ ಇವರ ಮಗ ಅಮಿತ್ ಎರಡು ನಾಯಿಗಳನ್ನು ಸಾಕಿದ್ದರು. ಈ ಪೈಕಿ ಬ್ರೌನಿ ಎಂಬ ಪಿಟ್ ಬುಲ್ ನಾಯಿಯನ್ನು ಮೂರು ವರ್ಷಗಳ ಹಿಂದೆ ತಂದಿದ್ದರು. ನಿನ್ನೆ ಬೆಳಿಗ್ಗೆ 6 ಗಂಟೆ ವೇಳೆಗೆ ಅಮಿತ್ ವಾಕ್ ಹೋಗಿದ್ದರು. ಈ ವೇಳೆ ನಾಯಿ ಅಮಿತ್ ಅವರ ತಾಯಿ ಸುಶೀಲಾ ಅವರನ್ನು ನಾಯಿ ಕಚ್ಚಲು ಆರಂಭಿಸಿದೆ. ಇದರಿಂದ ಭಯಭೀತರಾಗಿ ಅವರು ಕೂಗಿಕೊಂಡಾಗ ಅಕ್ಕಪಕ್ಕದವರು ಓಡಿ ಬಂದರಾದರೂ ಮನೆ ಲಾಕ್ ಆಗಿದ್ದ ಕಾರಣ ರಕ್ಷಿಸಲು ಸಾಧ್ಯವಾಗಲಿಲ್ಲ.

ಕೂಡಲೇ ಅಮಿತ್ ಗೆ ಕರೆ ಮಾಡಿ ಕರೆಸಿಕೊಳ್ಳಲಾಯಿತಾದರೂ ಅವರು ಬಂದು ಬೀಗ ತೆಗೆಯುವಷ್ಟರಲ್ಲಿ ಸುಶೀಲಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮನೆಯ ಸದಸ್ಯರೊಂದಿಗೆ ತುಂಬಾ ಹೊಂದಿಕೊಂಡಿದ್ದ ಈ ನಾಯಿ ಏಕಾಏಕಿ ಇಂತಹ ವರ್ತನೆ ತೋರಿಸಲು ಕಾರಣವೇನೆಂಬುದು ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

- Advertisement -
spot_img

Latest News

error: Content is protected !!