Monday, May 6, 2024
Homeಕರಾವಳಿಕೊಂಕಣ ರೈಲ್ವೇಗೆ ಜೂನ್ 10 ರಿಂದ ಅಕ್ಟೋಬರ್ 31ರ ವರೆಗೆ ಮುಂಗಾರು ವೇಳಾಪಟ್ಟಿ

ಕೊಂಕಣ ರೈಲ್ವೇಗೆ ಜೂನ್ 10 ರಿಂದ ಅಕ್ಟೋಬರ್ 31ರ ವರೆಗೆ ಮುಂಗಾರು ವೇಳಾಪಟ್ಟಿ

spot_img
- Advertisement -
- Advertisement -

ಕೊಂಕಣ ರೈಲ್ವೇಯು ಜೂನ್ 10 ರಿಂದ ಅಕ್ಟೋಬರ್ 31ರ ವರೆಗೆ  ಮುಂಗಾರು ವೇಳಾಪಟ್ಟಿಯನ್ನು ಅನುಸರಿಸಲಿದ್ದು, ಈ ಮಾರ್ಗದ ಮೂಲಕ ಸಂಚರಿಸುವ ರೈಲುಗಳ ವೇಳಾಪಟ್ಟಿಯು ಬದಲಾಗಲಿದೆ.  ಟಿಕೆಟ್ ಬುಕಿಂಗ್ ಮಾಡಿದವರು ಪ್ರಯಾಣಕ್ಕೆ ಮೊದಲು ವೇಳಾಪಟ್ಟಿಯನ್ನು ದೃಢಪಡಿಸಿ ಕೊಳ್ಳುವಂತೆ ದಕ್ಷಿಣ ರೈಲ್ವೇ ಸೂಚಿಸಿದೆ.

ನಂ. 12620 ಮಂಗಳೂರು ಸೆಂಟ್ರಲ್ ಮುಂಬಯಿ ಲೋಕಮಾನ್ಯ ತಿಲಕ್ ಮತ್ತ್ವಗಂಧಎಕ್ಸ್ ಪ್ರೆಸ್ ಮಂಗಳೂರಿನಿಂದ 12.40ಕ್ಕೆ (ಪ್ರಸ್ತುತ 2.15) ಹೊರಡಲಿದೆ.

ನಂ. 12619 ಮತ್ತ್ವಗಂಧ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 10.10ಕ್ಕೆ (ಪ್ರಸ್ತುತ ಬೆಳಗ್ಗೆ 7.40) ತಲಪುವುದು. 

ನಂ. 12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್ಎಎಂಟಿ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಸಂಜೆ 4.35ಕ್ಕೆ (ಮಧ್ಯಾಹ್ನ 2) ಹೊರಡುವುದು. 

ನಂ. 12133 ಮುಂಬಯಿ ಸಿಎಸ್‌ಟಿ-ಮಂಗಳೂರು ಜಂಕ್ಷನ್ ರೈಲು ಮಂಗಳೂರಿಗೆ ಸಂಜೆ 3.45(ಮಧ್ಯಾಹ್ನ 1.05)ಕ್ಕೆ ತಲಪುವುದು.

ನಂ. 06601 ಮಡಗಾಂವ್ ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಮಡಗಾಂವ್‌ನಿಂದ ಮಧ್ಯಾಹ್ನ 1.45 (ಮ. 2)ಕ್ಕೆ ಹೊರಡುವುದು. ಮಂಗಳೂರು ಜಂಕ್ಷನ್‌ಗೆ ಆಗಮನ, ನಿರ್ಗಮನ ರಾತ್ರಿ 9.08/9.10(ಪ್ರಸ್ತುತ 8.33/8.35). ರೈಲು ಮಂಗಳೂರು ಸೆಂಟ್ರಲ್‌ಗೆ ರಾತ್ರಿ 9.40(9.05)ಕ್ಕೆ ತಲಪುವುದು. 

ನಂ. 12431 ತಿರುವನಂತಪುರಂ ಸೆಂಟ್ರಲ್ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಮಂಗಳ, ಗುರು, ಶುಕ್ರವಾರಗಳಂದು ತಿರುವನಂತಪುರದಿಂದ ಮಧ್ಯಾಹ್ನ 2.30 (ಪ್ರಸ್ತುತ ರಾತ್ರಿ 7.15)ಕ್ಕೆ ಎಂದರೆ 4.45 ಗಂಟೆ ಬೇಗ ಹೊರಡಲಿದೆ. 

ನಂ. 12617 ಎರ್ನಾಕುಳಂ-ಹಜರತ್ ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ಎರ್ನಾಕುಳಂನಿಂದ ಬೆಳಗ್ಗೆ 10.40(ಮಧ್ಯಾಹ್ನ 1.25)ಕ್ಕೆ ಹೊರಡಲಿದೆ. 

ನಂ. 16346 ತಿರುವನಂತಪುರ ಮುಂಬಯಿ ನೇತ್ರಾವತಿ ಎಕ್ಸ್‌ಪ್ರೆಸ್ ಹೊರಡುವ ಸಮಯದಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಕಾಸರಗೋಡಿನಲ್ಲಿ ಆಗಮನ ನಿರ್ಗಮನ ರಾತ್ರಿ 8.08/08.10. ಮಂಗಳೂರು ಜಂಕ್ಷನ್ ರಾತ್ರಿ 9.30/9.40. ಇದು ಪ್ರಸ್ತುತ ಸಮಯಕ್ಕಿಂತ ಒಂದು ಗಂಟೆ ಮೊದಲಾಗಿರುತ್ತದೆ. 

ನಂ. 12977 ಎರ್ನಾಕುಳಂ ಜಂಕ್ಷನ್-ಅಜೇರ್ ಮರುಸಾಗರ್ ಎಕ್ಸ್‌ಪ್ರೆಸ್ ರವಿವಾರಗಳಂದು ಎರ್ನಾಕುಳಂನಿಂದ ಹೊರಡುವುದು. ಹೊರಡುವವ ಸಮಯ ಸಂಜೆ 6.50 (ಪ್ರಸ್ತುತ 8.25).

ನಂ.19577 ತಿರುನಲ್ವೇಲಿ ಜಂಕ್ಷನ್-ಜಾಮ್ ನಗರ್ ಸೋಮವಾರ, ಮಂಗಳವಾರಗಳಂದು ತಿರುನಲ್ವೇಲಿಯಿಂದ ಬೆಳಗ್ಗೆ 5.15ಕ್ಕೆ(ಪ್ರಸ್ತುತ 8)ಹೊರಡುವುದು.

ನಂ. 22659 ಕೊಚ್ಚುವೇಲಿ ಯೋಗನಗರಿ ಹೃಷಿಕೇಶ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಶುಕ್ರವಾರಗಳಂದು ಕೊಚ್ಚುವೇಲಿಯಿಂದ ಬೆಳಗ್ಗೆ 4.50(9.10)ಕ್ಕೆ ಹೊರಡುವುದು. 

ನಂ.12202 ಕೊಚ್ಚುವೇಲಿ ಲೋಕಮಾನ್ಯ ತಿಲಕ್ ಗರೀಬ್‌ರಥ್ ಎಕ್ಸ್‌ಪ್ರೆಸ್ ಕೊಚ್ಚು ವೇಲಿಯಿಂದ ಬೆಳಗ್ಗೆ 7.45(ಪ್ರಸ್ತುತ 8.45)ಕ್ಕೆ ಹೊರಡುವುದು. ನಂ.22476 ಕೊಯಮತ್ತೂರು ಹಿಸಾರ್ ಕೊಯಮತ್ತೂರಿನಿಂದ ಮಧ್ಯಾಹ್ನ 12.40 (ಪ್ರಸ್ತುತ 2.55)ಕ್ಕೆ ಹೊರಡುವುದು.

ನಂ. 02197 ಕೊಯ ಮತ್ತೂರು ಜಂಕ್ಷನ್ ಜಬಲ್ಲುರ ವಿಶೇಷ ರೈಲು ಕೊಯಮತ್ತೂರಿನಿಂದ ಸಂಜೆ 3.25(ಪ್ರಸ್ತುತ 5.05)ಕ್ಕೆ ಹೊರಡಲಿದೆ. ಇದು ಜೂನ್ 13ರಿಂದ ಆಗಸ್ಟ್ 1ರ ವರೆಗೆ ಅನ್ವಯ ಎಂದು ಪ್ರಕಟನೆ ತಿಳಿಸಿದೆ.

- Advertisement -
spot_img

Latest News

error: Content is protected !!