Tuesday, June 23, 2026
Homeಕರಾವಳಿನೆರಿಯ ಮನೆಗೆ ಬೆಂಕಿ ಬಿದ್ದು ಹಾನಿಯಾದ ಕುಟುಂಬಕ್ಕೆ ಕಿರಣ್ ಚಂದ್ರ ಡಿ ಪುಷ್ಪಗಿರಿ ಅವರಿಂದ ಸಹಾಯ...

ನೆರಿಯ ಮನೆಗೆ ಬೆಂಕಿ ಬಿದ್ದು ಹಾನಿಯಾದ ಕುಟುಂಬಕ್ಕೆ ಕಿರಣ್ ಚಂದ್ರ ಡಿ ಪುಷ್ಪಗಿರಿ ಅವರಿಂದ ಸಹಾಯ ಹಸ್ತ

- Advertisement -
- Advertisement -

ಬೆಳ್ತಂಗಡಿ : ನೆರಿಯ ನಿವಾಸಿ ಹರೀಶ್ ವಿ. ಮನೆಗೆ ಅ.6 ರಂದು ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆಗೆ ಸಂಪೂರ್ಣವಾಗಿ ಹಾನಿಯಾದ ಮನೆಗೆ ಕಿರಣ್ ಚಂದ್ರ ಡಿ ಪುಷ್ಪಗಿರಿಯವರ ಟೀಂ ಪುಷ್ಪಗಿರಿ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ತುರ್ತಾಗಿ ಬೇಟಿ, ಕಿರಣ್ ಚಂದ್ರ ರವರ ಸಲಹೆ ಮೇರೆಗೆ ಮನೆ ಪುನರ್ನಿರ್ಮಾಣ ಕಾರ್ಯಕ್ಕೆ 25 ಸಾವಿರ ರೂಪಾಯಿಗಳ ಧನ ಸಹಾಯ ಮಾಡಿದರು.

ಈ ಸಂಧಭದಲ್ಲಿ ಮನೆಯವರ ಜೊತೆ ಕರೆ ಮಾಡಿ ಮಾತನಾಡಿದ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಮನೆಯ ದುರಸ್ತಿ ಕಾರ್ಯಕ್ಕೆ ಇನ್ನಷ್ಟು ಆರ್ಥಿಕ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಉಜಿರೆ ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರಾದ ಬಾಬು ಗೌಡ ನೆರಿಯ, ತೋಟತ್ತಾಡಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಓಬಯ್ಯ ಗೌಡ ಚಿಬಿದ್ರೆ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಭರತ್ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!