Wednesday, June 3, 2026
Homeಇತರಕೊಡಗು: ಮನೆ ಬಳಿ ಬಂದಿದ್ದ ಕಾಳಿಂಗ ಸರ್ಪ ಸೆರೆ

ಕೊಡಗು: ಮನೆ ಬಳಿ ಬಂದಿದ್ದ ಕಾಳಿಂಗ ಸರ್ಪ ಸೆರೆ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ಸಮೀಪದ ತೂಚಮಕೇರಿಯಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಮುಂಡುಮಾಡ ಪ್ರವೀಣ್ ಎಂಬವರ ಮನೆ ಆವರಣದಲ್ಲಿ ಕಾಳಿಂಗ ಸರ್ಪ ಸೇರಿಕೊಂಡಿತ್ತು. ನಂತರ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಭಾವೆ ಹಿಡಿದು ಮಾಕುಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.

ಮನೆಯ ಸಮೀಪದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಾಗ ಮನೆಯವರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ವಿಷಯ ತಿಳಿದ ಗ್ರಾಮಸ್ಥರು ಸ್ನೇಕ್‌ ಭಾವೆ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಭಾವೆ ಅವರು, ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾದರು.

- Advertisement -

Latest News

error: Content is protected !!