Friday, May 17, 2024
Homeಕರಾವಳಿಉಡುಪಿಕರಾವಳಿ ಕಂಬಳಕ್ಕೆ ನೂತನ ನಿಯಮಗಳ ಸೇರ್ಪಡೆ: ನಿಯಮ ಉಲ್ಲಂಘಿಸಿದರೆ ಅಮಾನತು!!

ಕರಾವಳಿ ಕಂಬಳಕ್ಕೆ ನೂತನ ನಿಯಮಗಳ ಸೇರ್ಪಡೆ: ನಿಯಮ ಉಲ್ಲಂಘಿಸಿದರೆ ಅಮಾನತು!!

spot_img
- Advertisement -
- Advertisement -

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ವಿಶ್ವ ಮಾನ್ಯತೆ ದೊರಕಿದೆ. ಕಂಬಳ ಪ್ರಸಿದ್ಧಿಯ ಉತ್ತುಂಗದಲ್ಲಿರುವಂತೆಯೇ ಕಂಬಳದ ಕೆಲ ನಿಯಮಗಳನ್ನು ಮಾರ್ಪಾಡು ಮಾಡಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ ಮಾಡಿದೆ.

ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಮಾಡಿದೆ. ಒಬ್ಬ ಓಟಗಾರನಿಗೆ ಮೂರು ಜೊತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಒಂದೇ ತಂಡದ ಎರಡು ಜೊತೆ ಯ ಕೋಣಗಳಿದ್ದರೆ ಮಾತ್ರ 4 ಜೊತೆ ಕೋಣಗಳನ್ನು ಓಡಿಸಬಹುದಾಗಿದೆ. ಇದರಿಂದ ಹೊಸ ಓಟಗಾರರಿಗೆ ಅವಕಾಶ ನೀಡಿದಂತಾಗುತ್ತದೆ.

ಇನ್ನು ಕಂಬಳವನ್ನು 24 ಗಂಟೆಯೊಳಗೆ ಮುಗಿಸಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ ಮಾಡಿದೆ. ಬೆಳಗ್ಗೆ 9 ಗಂಟೆಗೆ ಕಂಬಳ ಆರಂಭ ಮಾಡಿ ಮರುದಿನ ಬೆಳಿಗ್ಗೆ9 ಗಂಟೆಗೆ ಕಂಬಳವನ್ನು ಮುಗಿಸಬೇಕೆಂದು ತೀರ್ಮಾನ ಮಾಡಲಾಗಿದೆ.

ಕಂಬಳ ವಿಳಂಬವಾಗುವುದನ್ನು ತಪ್ಪಿಸಲು ಕಂಬಳ ಕೋಣಗಳನ್ನು 5 ನಿಮಿಷದ ಒಳಗಾಗಿ ಕಂಬಳದ ಗದ್ದೆಗೆ ತರಬೇಕೆಂಬ ನಿಯಮ ಮಾಡಲಾಗಿದೆ. ತಡವಾದರೆ ಆ ತಂಡವನ್ನು ಕೈ ಬಿಟ್ಟು ವಾಕ್ ಓವರ್ ಅಂತಾ ಘೋಷಣೆ ಮಾಡಲು ನಿರ್ಧಾರ ಮಾಡಲಾಗಿದೆ.

ಇನ್ನು ಕಂಬಳದ‌ ತೀರ್ಪುಗಾರರು ಮದ್ಯಪಾನ ಮಾಡಿ ಬರುವಂತಿಲ್ಲ ಎಂಬುವುದಾಗಿ ಆದೇಶ ಮಾಡಲಾಗಿದೆ. ಇನ್ನು ಕಂಬಳದ ಬಗ್ಗೆ ಯಾವುದಾದರೂ ದೂರುಗಳಿದ್ದರೂ ಜಿಲ್ಲಾ ಕಂಬಳ ಸಮಿತಿಯ ಗಮನಕ್ಕೆ ತರಬೇಕು. ಯಾವುದಾದರೂ ತಂದ ತಪ್ಪು ಸಾಬೀತಾದರೆ ಒಂದು ವರ್ಷಗಳ‌ ಕಾಲ ಆ ತಂಡವನ್ನು ಕಂಬಳದಿಂದ ಅಮಾನತು ಮಾಡುವ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ.ಕಂಬಳ ಓಟಗಾರರು ಮತ್ತು ಕೋಣಗಳ ಯಜಮಾನರು ಕಂಬಳ ಸಮಿತಿಯ ಸದಸ್ಯತ್ವ ಪಡೆಯಬೇಕೆಂಬ ನಿರ್ಧಾರವನ್ನೂ ಮಾಡಲಾಗಿದೆ.

ಕಂಬಳದಲ್ಲಿ ಕನೆಹಲಗೆ, ಹಗ್ಗದ ಹಿರಿಯ, ಹಗ್ಗದ ಕಿರಿಯ, ನೇಗಿಲು ಕಿರಿಯ, ನೇಗಿಲು ಹಿರಿಯ ಎಂಬ ವಿಧಗಳಿವೆ. ಕಂಬಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ,ಕಾಸರಗೋಡು ಜಿಲ್ಲೆಯಲ್ಲೂ ನಡೆಯುತ್ತದೆ. ನವೆಂಬರ್ ಎರಡನೇ ವಾರದಲ್ಲಿ ಕಂಬಳ ಆರಂಭವಾಗುವ ಕಂಬಳ ಎಪ್ರಿಲ್ ತಿಂಗಳಿನವರೆಗೂ ನಡೆಯುತ್ತದೆ. ದಕ್ಷಿಣ ಕನ್ನಡ,ಉಡುಪಿ,ಮತ್ತು ಕಾಸರಗೋಡು ಜಿಲ್ಲೆಯಲ್ಲೂ ಕಂಬಳ ನಡೆಯುತ್ತದೆ. ಆಧುನಿಕ ಕಂಬಳದಲ್ಲಿ ಹಲವು ನಿಯಮಗಳನ್ನು ಮಾಡಲಾಗಿದೆ.ಕಂಬಳದ ಗದ್ದೆಯಲ್ಲಿ ಕಂಬಳದ ಕೋಣವನ್ನು ಬಿಡುವ ಸಂದರ್ಭದಲ್ಲಿ ಲೇಸರ್ ತಂತ್ರಜ್ಞಾನ ವನ್ನು ಮಾಡಲಾಗಿದೆ. ಕೋಣಗಳನ್ನು ಗುರಿ ತಲುಪುವ ಸಂದರ್ಭದಲ್ಲೂ ಲೇಸರ್ ತಂತ್ರಜ್ಞಾನ ದ ಮೂಲಕ ತೀರ್ಪು ನೀಡಲಾಗುತ್ತದೆ. ಹೀಗಾಗಿ ಮತ್ತಷ್ಟು ತಂತ್ರಜ್ಞಾನ ವನ್ನು ಉಪಯೋಗಿಸುವ ಮೂಲಕ ಕಂಬಳಕ್ಕೆ ನೂತನ ಸ್ಪರ್ಶ ನೀಡಲು ಕಂಬಳ ಸಮಿತಿ ನಿರ್ಧಾರ ಮಾಡಿದೆ

- Advertisement -
spot_img

Latest News

error: Content is protected !!