- Advertisement -
- Advertisement -
ಬೆಂಗಳೂರು: 500 ರೂಪಾಯಿ ಮತ್ತು ಒಂದು ಕೀ ಪ್ಯಾಡ್ ಮೊಬೈಲ್ ಗಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯ ಬಾರ್ ಮುಂದೆ ಈ ಕೊಲೆ ನಡೆದಿತ್ತು. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆರೋಪಿ ಕೊಲೆ ಮಾಡಿದ್ದ. ಕುಡಿದು ಬೀದಿ ಬದಿ ಮಲಗಿದ್ದವರನ್ನ ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಕುಡಿದ ನಶೆಯಲ್ಲಿ ಮಲಗಿದ್ದವರ ಜೇಬಿನಿಂದ ಹಣ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ.
ಇದೀಗ ಕೊಲೆ ಆರೋಪಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
- Advertisement -