Saturday, June 6, 2026
Homeಅಪರಾಧಮೋಸ್ಟ್ ವಾಂಟೆಡ್ ಮುಂಬೈ ದರೋಡೆಕೋರ ಅಬ್ದುಲ್ ಆಸಿಫ್ ಭಕ್ಕನಾ ಬಂಧನ

ಮೋಸ್ಟ್ ವಾಂಟೆಡ್ ಮುಂಬೈ ದರೋಡೆಕೋರ ಅಬ್ದುಲ್ ಆಸಿಫ್ ಭಕ್ಕನಾ ಬಂಧನ

- Advertisement -
- Advertisement -

ಬೆಂಗಳೂರು: ಮಂಗಳವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ಪೊಲೀಸರು ಮೋಸ್ಟ್ ವಾಂಟೆಡ್ ಮುಂಬೈ ದರೋಡೆಕೋರರಲ್ಲಿ ಒಬ್ಬನಾದ ಅಬ್ದುಲ್ ಆಸಿಫ್ ಅ.ಕಾ ಭಕ್ಕನಾನನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಮುಂಬೈ ಪೊಲೀಸರಿಗೆ 37 ಗಂಭೀರ ಅಪರಾಧಗಳಲ್ಲಿ ಬೇಕಾಗಿದ್ದನು – ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಮತ್ತು ಮಾದಕವಸ್ತು ಪ್ರಕರಣಗಳು.

ಬೆಂಗಳೂರು ಗ್ರಾಮಾಂತರ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ವಂಶಿಕೃಷ್ಣ, ಹೆಚ್ಚುವರಿ ಎಸ್‌ಪಿ ಲಕ್ಷ್ಮೀಗಣೇಶ್‌, ಆನೇಕಲ್‌ ಉಪ ಎಸ್‌ಪಿ ಎಂ.ಮಲ್ಲೇಶ್‌ ನೇತೃತ್ವದ ತಂಡ ಖಾಸಗಿ ರೆಸ್ಟೋರೆಂಟ್‌ನಲ್ಲಿ ತಂಗಿರುವ ಆರೋಪಿಯ ಬಗ್ಗೆ ಮಾಹಿತಿ ಪಡೆದು ವಿಶೇಷ ಕಾರ್ಯಾಚರಣೆ ನಡೆಸಿತು.

ಬಂಧನದ ವೇಳೆ ಆರೋಪಿಯು ಲೋಡ್ ಗನ್ ಹಿಡಿದಿದ್ದನಾದರೂ ಆತನನ್ನು ಸದೆಬಡಿಯುವಲ್ಲಿ ತಂಡ ಯಶಸ್ವಿಯಾಗಿದೆ. ಆರೋಪಿಯಿಂದ ನಾಲ್ಕು ಜೀವಂತ ಗುಂಡುಗಳು, ಒಂದು ಪಿಸ್ತೂಲ್, 15 ಸಿಮ್ ಕಾರ್ಡ್‌ಗಳು ಮತ್ತು ಆರು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮುಂಬೈನ ಕಚೇರಿಯಲ್ಲಿ ಉದ್ಯಮಿ ಸಿಕಂದರ್ ರಾಜು ಲುಲಾಡಿಯಾ ಅವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈ ಆರೋಪಿ ಬೇಕಾಗಿದ್ದ. ಮುಂಬೈ ಪೊಲೀಸರು ನಗರ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಹುಡುಕಾಟವನ್ನು ತೀವ್ರಗೊಳಿಸಿದ ನಂತರ ಆರೋಪಿ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದಾನೆ.

- Advertisement -

Latest News

error: Content is protected !!