Saturday, June 6, 2026
Homeಕರಾವಳಿಉಡುಪಿಉಡುಪಿ: ಕಾರಿನಲ್ಲಿ ಬಂದ ನಾಲ್ವರ ತಂಡದಿಂದ ವ್ಯಕ್ತಿಯ ಅಪಹರಣ: ಸಿಸಿಟಿವಿಯಲ್ಲಿ ಕಿಡ್ನ್ಯಾಪ್‌ ದೃಶ್ಯ ಸೆರೆ

ಉಡುಪಿ: ಕಾರಿನಲ್ಲಿ ಬಂದ ನಾಲ್ವರ ತಂಡದಿಂದ ವ್ಯಕ್ತಿಯ ಅಪಹರಣ: ಸಿಸಿಟಿವಿಯಲ್ಲಿ ಕಿಡ್ನ್ಯಾಪ್‌ ದೃಶ್ಯ ಸೆರೆ

- Advertisement -
- Advertisement -

ಉಡುಪಿ: ಬೆಳ್ಳಂಬೆಳಗ್ಗೆಯೇ ವ್ಯಕ್ತಿಯೊಬ್ಬನನ್ನ ನಾಲ್ವರ ತಂಡ ಅಪಹರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಿಲ್ಲೆಯ ಜನರನ್ನ ಬೆಚ್ಚಿಬೀಳಿಸಿದೆ.

ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜುನಿಂದ ರೋಗಿಯೊಬ್ಬರು ಉಡುಪಿಗೆ ತಪ್ಪಿಸಿಕೊಂಡು ಬಂದಿದ್ರು. ಉಡುಪಿಯಲ್ಲಿ ಇನ್ನೊವಾ ಕಾರಿನಲ್ಲಿ ಬಂದ ನಾಲ್ವರ ತಂಡ ರೋಗಿಯನ್ನು ಅಪಹರಿಸಿದ ಘಟನೆ ಉಡುಪಿ ರಥಬೀದಿ ಕನಕದಾಸ ರಸ್ತೆಯಲ್ಲಿ ನಡೆದಿದೆ.

ಯೋಗೀಶ್ ಭಟ್ (54) ಸೆ.8 ರಂದು ಬೆಂಗಳೂರಿನ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದವರು.

ಇವರು ಉಡುಪಿಯಲ್ಲಿ ಸಂಬಂಧಿಕರ ಮನೆಯಲ್ಲಿದ್ರು. ಕೊನೆಗೆ ಅಲ್ಲಿಂದಲೂ ತಪ್ಪಿಸಿಕೊಂಡಿದ್ರು.  ನಂತರ ಇನ್ನೊವಾ ಕಾರಿನಲ್ಲಿ ಬಂದ ನಾಲ್ವರಿದ್ದ ತಂಡವು ಯೋಗೀಶ್ ಅವರನ್ನು ಕನಕದಾಸ ರಸ್ತೆಯಲ್ಲಿ ಬಲಾತ್ಕಾರವಾಗಿ ಅಪಹರಿಸಿದ್ದರು.

ಈ ದೃಶ್ಯ ಪಡುಬಿದ್ರೆಯ ಟೋಲ್ ಗೇಟ್ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ರೋಗಿಯು ತಪ್ಪಿಸಿಕೊಂಡಿದ್ದ KA04 ನೋಂದಣಿಯ ಇನೋವಾ ಕಾರನ್ನು ಪತ್ತೆಹಚ್ಚಿ ರೋಗಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!