Sunday, June 7, 2026
Homeಕರಾವಳಿಉಡುಪಿಕುಂದಾಪುರ: ಯುವಕನ ಅಪಹರಣ ಪ್ರಕರಣ ಸುಖಾಂತ್ಯ: 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು

ಕುಂದಾಪುರ: ಯುವಕನ ಅಪಹರಣ ಪ್ರಕರಣ ಸುಖಾಂತ್ಯ: 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು

- Advertisement -
- Advertisement -

ಕುಂದಾಪುರ: ಯುವಕನೊಬ್ಬನ ಅಪಹರಣ ಪ್ರಕರಣವನ್ನು 24 ಗಂಟೆಗಳಲ್ಲಿ ಕುಂದಾಪುರ ಪೊಲೀಸರು ಭೇದಿಸಿದ್ದಾರೆ.

ಕುಂದಾಪುರ ತಾಲೂಕಿನ ಸಿದ್ದಾಪುರದ ಜನ್ಸಾಲೆ ಎಂಬಲ್ಲಿನ ಗೋವಿಂದ ಶೆಟ್ಟಿ ಎಂಬುವರ ಮಗ ಶಶಾಂಕ (21) ಅಪಹರಣಕ್ಕೊಳಗಾಗಿದ್ದ ಯುವಕ. 24 ಗಂಟೆಗಳಲ್ಲಿ ಕುಂದಾಪುರ ಪೊಲೀಸರು ಪ್ರಕರಣ ಭೇದಿಸಿದ್ದು,ಪ್ರಕರಣ ಸಂಬಂಧ ಹುಬ್ಬಳ್ಳಿ ಮೂಲದ ಕಿರಣ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಕಿರಣ್ ಹಾಗೂ ಶಶಾಂಕ್ ನಡುವೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದೆ.

ಅ.31 ರಂದು ಬೆಳಿಗ್ಗೆ 9.30 ರ ಸುಮಾರಿಗೆ ಶಶಾಂಕನನ್ನ ಕಿರಣ್‌ ಅಪಹರಿಸಿ ಶಶಾಂಕ್‌ ತಂದೆಗೆ ಗೋವಿಂದ ಶೆಟ್ಟಿಗೆ ಕಾಲ್‌ ಮಾಡಿ  30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾದ 24 ಗಂಟೆಗಳೊಳಗೆ ನಾಪತ್ತೆಯಾದ ಶಶಾಂಕ್ ಹಾಗೂ ಆರೋಪಿ ಹುಬ್ಬಳ್ಳಿ ಮೂಲದ ಕಿರಣನನ್ನು ಕುಷ್ಟಗಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!