Friday, June 5, 2026
Homeಕರಾವಳಿಮಂಗಳೂರು; ಆಟಿಕೆಯ ಪಿಸ್ತೂಲ್ ತೋರಿಸಿ ಕಾರು ದರೋಡೆ; ಆರೋಪಿಯ ಬಂಧನ

ಮಂಗಳೂರು; ಆಟಿಕೆಯ ಪಿಸ್ತೂಲ್ ತೋರಿಸಿ ಕಾರು ದರೋಡೆ; ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು; ಕಾರು ಸಹಿತ ವ್ಯಕ್ತಿಯನ್ನು ಆಟಿಕೆ ಪಿಸ್ತೂಲ್ ತೋರಿಸಿ ಅಪಹರಣಗೈದು ಮೊಬೈಲ್ ಹಾಗೂ ಕಾರನ್ನು ದೋಚಿದ್ದ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಜಾಲ್‌ ನಂತೂರಿನ ನೌಫಾಲ್‌ ಯಾನೆ ಟೊಪ್ಪಿ ನೌಫಾಲ್‌ (31) ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಪುಚ್ಚ ತಲೆಮರೆಸಿಕೊಂಡಿದ್ದಾನೆ. ನೌಫಾಲ್‌ ಮತ್ತು ಪುಚ್ಚ ತಮ್ಮ ಪರಿಚಯದ ಮಜೀದ್‌ ಸೈಯದ್‌ ಅವರನ್ನು ಅಪಹರಣ ಮಾಡಿ 5 ಲಕ್ಷ ರೂ.ಹಾಗೂ ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರು ಕೊಡಲು ನಿರಾಕರಿಸಿದಾಗ ಅವರ ಬಳಿಯಿಂದ ಕಾರು, ಮೊಬೈಲ್‌ ಹಾಗೂ 18 ಸಾವಿರ ರೂ., ಮಗಳ ಮೊಬೈಲ್‌ ಸುಲಿಗೆ ಮಾಡಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗ್ರಾಮಾಂತರ ಪೊಲೀಸ್‌ ಠಾಣಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನೌಫಾಲ್‌ನನ್ನು ಪಾಂಡೇಶ್ವರ ಇನ್‌ಸ್ಪೆಕ್ಟರ್‌ ಎ.ಸಿ. ಲೋಕೇಶ್‌ ಅವರು ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ.

- Advertisement -

Latest News

error: Content is protected !!