Friday, June 26, 2026
Homeಕರಾವಳಿವಿಟ್ಲ; ಶಾಲೆ ಹೋಗುವ ಬಾಲಕಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅನುಚಿತ ವರ್ತನೆ

ವಿಟ್ಲ; ಶಾಲೆ ಹೋಗುವ ಬಾಲಕಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅನುಚಿತ ವರ್ತನೆ

- Advertisement -
- Advertisement -

ವಿಟ್ಲ; ಶಾಲೆ ಹೋಗುವ ಬಾಲಕಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅನುಚಿವಾಗಿ ವರ್ತಿಸಿದ ಬಗ್ಗೆ  ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಮ್ಮದ್‌ ನೌಷಾದ್‌ ಎಂಬಾತ  ಬಾಲಕಿಯ ಮನೆಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಶಾಲೆಗೆ ತೆರಳಿದ್ದ ಬಾಲಕಿಯನ್ನು ಪುಸಲಾಯಿಸಿ ವಿಟ್ಲ ಪೇಟೆಯಿಂದ ಉಳ್ಳಾಲ ಬೀಚಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿ ಕೊಡಂಗಾಯಿಯಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಶಿಕ್ಷಕಿಯೋರ್ವರು ಹೆತ್ತವರಲ್ಲಿ ನಿಮ್ಮ ಮಗಳು ಇವತ್ತು ಶಾಲೆಗೆ ಯಾಕೆ ಬಂದಿಲ್ಲ ಎಂದು ವಿಚಾರಿಸಿದ್ದಾರೆ. ಈ ವೇಳೆ ಬಾಲಕಿಯ ತಾಯಿ ಆಕೆಯ ಸಹಪಾಠಿಗಳಲ್ಲಿ ವಿಚಾರಿಸಿದ್ದರು. ಆಗ ಆಕೆ ಬೈಕ್‌ನಲ್ಲಿ ತೆರಳಿದ್ದ ಮಾಹಿತಿ ತಿಳಿದುಬಂದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!