Wednesday, June 3, 2026
HomeUncategorizedಬೆಂಗಳೂರು: ಕೆಜಿಫ್-2 ಟ್ರೇಲರ್ ಬಿಡುಗಡೆಗೆ ಡೇಟ್ ಫಿಕ್ಸ್

ಬೆಂಗಳೂರು: ಕೆಜಿಫ್-2 ಟ್ರೇಲರ್ ಬಿಡುಗಡೆಗೆ ಡೇಟ್ ಫಿಕ್ಸ್

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ  ಯಶ್ ನಟನೆಯ, ಬಿಗ್‌ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಫ್ ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದ ಎರಡನೇ ಭಾಗದ ಟ್ರೇಲರ್ ಮಾ.27ರಂದು ಸಂಜೆ 6.40ಕ್ಕೆ ಬಿಡುಗಡೆಯಾಗಲಿದೆ.


ಏಪ್ರಿಲ್ 14ರಂದು ಈ ಸಿನಿಮಾ ತೆರೆ ಕಾಣುತ್ತಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ. ಚಿತ್ರದಲ್ಲಿ ‘ರಮಿಕಾ ಸೇನ್’ ಎಂಬ ಪ್ರಧಾನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆಷ್ಟೇ ತಮ್ಮಪಾತ್ರದ ಡಬ್ಬಿಂಗ್ ಪೂರ್ಣಗೊಳಿಸಿದ್ದರು. ಚಿತ್ರತಂಡವು ಈಗಾಗಲೇ ಪ್ರಚಾರವನ್ನು ಆರಂಭಿಸಿದೆ. ಕೇರಳದಲ್ಲಿ ನಟ ಪೃಥ್ವಿರಾಜ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಸಂಸ್ಥೆಯು ಕೆ.ಜಿ.ಎಫ್-2 ಸಿನಿಮಾವನ್ನು ವಿತರಣೆ ಮಾಡಲಿದೆ.

- Advertisement -

Latest News

error: Content is protected !!