Monday, May 13, 2024
Homeತಾಜಾ ಸುದ್ದಿಕೇರಳದಲ್ಲಿ 10 ಕೋಟಿ ಕೇರಳ ಲಾಟರಿ ಗೆದ್ದ ಸ್ವಚ್ಛತಾ ಕಾರ್ಮಿಕ ಮಹಿಳೆಯರು

ಕೇರಳದಲ್ಲಿ 10 ಕೋಟಿ ಕೇರಳ ಲಾಟರಿ ಗೆದ್ದ ಸ್ವಚ್ಛತಾ ಕಾರ್ಮಿಕ ಮಹಿಳೆಯರು

spot_img
- Advertisement -
- Advertisement -

ಕೇರಳದಲ್ಲಿ 11 ಜನ ಸ್ವಚ್ಛತಾ ಕಾರ್ಮಿಕ ಮಹಿಳೆಯರ ತಂಡವೊಂದು ಬರೋಬ್ಬರಿ 10 ಕೋಟಿ ಕೇರಳ ಲಾಟರಿ ಗೆದ್ದಿದೆ.ಪರಪ್ಪನಗರಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ (ಹಸಿರು ಸ್ವಯಂಸೇವಕ ಪಡೆ)ಯ ಸ್ವಚ್ಛತಾ ಕಾರ್ಮಿಕ ಮಹಿಳೆಯರು 250 ರೂ.ಗೆ ಖರೀದಿಸಿದ ಲಾಟರಿ ಟಿಕೆಟ್‌ಗೆ ಪ್ರಥಮ ಬಹುಮಾನ 10 ಕೋಟಿ ರೂಪಾಯಿ ಬಂದಿದೆ.ಈ ಗುಂಪು ನಾಲ್ಕನೇ ಬಾರಿಗೆ ಬಂಪರ್ ಲಾಟರಿ ಟಿಕೆಟ್ ಖರೀದಿಸುತ್ತಿದೆ ಎಂದು ವಿಜೇತರು ಹೇಳಿದ್ದಾರೆ.ಅವರು ಈ ಹಿಂದೆ 1,000 ರೂ.ಬಹುಮಾನ ಗೆದ್ದಿದ್ದರು.

ಸ್ವಂತವಾಗಿ ಖರೀದಿಸಲು ಹಣವಿಲ್ಲದ ಕಾರಣ ಈ ಮಹಿಳೆಯರು ಎಲ್ಲರೂ ಸೇರಿ 250ರೂ. ಸೇರಿಸಿ ಟಿಕೆಟ್ ಖರೀದಿಸಿದ್ದರು. BR-92 ಲಕ್ಕಿ ಡ್ರಾದ ವಿಜೇತ ಟಿಕೆಟ್ MB200261 ಆಗಿತ್ತು. ಲಾಟರಿಯು 10 ಲಕ್ಷ, 5 ಲಕ್ಷ, 3 ಲಕ್ಷ, 1 ಲಕ್ಷ ಇತ್ಯಾದಿ ಬಹು ಬಹುಮಾನಗಳನ್ನು ಕೂಡ ಹೊಂದಿದೆ.

ವಿಜೇತ ಟಿಕೆಟ್ ನ್ನು ಪರಪ್ಪನಂಗಡಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಸಲ್ಲಿಸಲಾಗಿದೆ ಮತ್ತು ಆದಾಯ ತೆರಿಗೆ ಮತ್ತು ಏಜೆಂಟ್ ಕಮಿಷನ್ ಕಡಿತಗೊಳಿಸಿದ ನಂತರ ವಿಜೇತರ ಖಾತೆಗಳಲ್ಲಿ ಮೊತ್ತವನ್ನು ಜಮಾ ಮಾಡಲಾಗುತ್ತದೆ.ಕೆಲವು ತಿಂಗಳ ಹಿಂದೆ, ಕೇರಳ ಲಾಟರಿ ಇಲಾಖೆಯು ವಿಜೇತರಿಗೆ ವಿವಿಧ ಹೂಡಿಕೆ ಆಯ್ಕೆಗಳ ಬಗ್ಗೆ ಅರಿವು ಮೂಡಿಸಲು ಹಣ ನಿರ್ವಹಣೆ ತರಗತಿಯನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವು ಹಣವನ್ನು ನಿರ್ವಹಿಸಲು ಹೆಣಗಾಡುತ್ತಿರುವ ವಿಜೇತರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಸದ್ಯ ಸ್ವಚ್ಛತಾ ಕಾರ್ಮಿಕ ಮಹಿಳೆಯಿರಿಗೆ ಬಹುಮಾನ ಬಂದಿರೋದು ಅವರಿಗೆಲ್ಲಾ ಹೊಸ ಬದುಕು ಕಟ್ಟಿಕೊಡಲು ಅನುವು ಮಾಡಿಕೊಟ್ಟಿದೆ. ಅಲ್ಲದೇ ಹಮ ತಲುಪಬೇಕಾದರಿಗೇ ತಲುಪಿದೆ ಅಂತಾ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!