Thursday, May 2, 2024
Homeಕರಾವಳಿಮಂಗಳೂರು; ನಿರಂತರ ಮಳೆಗೆ ರಜೆ ನೀಡಿದ್ದಕ್ಕೆ ದ.ಕ ಡಿಸಿಗೆ ವಿಡಿಯೋ ವೂಲಕ ಧನ್ಯವಾದ ಸಲ್ಲಿಸಿದ ಕಿಲಾಡಿ...

ಮಂಗಳೂರು; ನಿರಂತರ ಮಳೆಗೆ ರಜೆ ನೀಡಿದ್ದಕ್ಕೆ ದ.ಕ ಡಿಸಿಗೆ ವಿಡಿಯೋ ವೂಲಕ ಧನ್ಯವಾದ ಸಲ್ಲಿಸಿದ ಕಿಲಾಡಿ ಮಕ್ಕಳು

spot_img
- Advertisement -
- Advertisement -

ಮಂಗಳೂರು;ದ.ಕ ಜಿಲ್ಲೆಯಲ್ಲಿ  ನಿರಂತರ ಮಳೆ ಹಿನ್ನೆಲೆ ಜಿಲ್ಲೆಯ ಶಾಲೆಗಳಿಗೆ ಮೂರ್ನಾಲ್ಕು ದಿನ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ಕಿಲಾಡಿ ಮಕ್ಕಳ ಗುಂಪೊಂದು ಧನ್ಯವಾದ ತಿಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ವಿದ್ಯಾರ್ಥಿಯೋರ್ವ ದ.ಕ ಜಿಲ್ಲಾಧಿಕಾರಿಯ ಹಲವು ಫೋಟೋಗಳನ್ನು ಅಂಟಿಸಿ ಕೂತಿರುತ್ತಾನೆ. ಆತನ ಬಳಿ ಇನ್ನೋರ್ವ ಬಂದು ಇದು ಯಾರ ಫೋಟೋ ಇಷ್ಟೊಂದು ಅಂಟಿಸಿದ್ದೀಯಾ ಎಂದು ಕೇಳುತ್ತಾನೆ.ಆಗ ಆ ವಿದ್ಯಾರ್ಥಿ ಇದು ನಮ್ಮ ಜಿಲ್ಲಾಧಿಕಾರಿ. ಮಳೆ ಬಂದಾಗ ನಮಗೆ ಶಾಲೆಗೆ ರಜೆ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಫೋಟೋ ತೋರಿಸಿ ವಿವರಿಸುತ್ತಾನೆ. ಈ ಸಂದರ್ಭ ಮತ್ತೋರ್ವ ವಿದ್ಯಾರ್ಥಿ ಬಂದು ಜಿಲ್ಲಾಧಿಕಾರಿಗೆ ಜೈ ಎಂದು ಘೋಷಣೆ ಕೂಗುತ್ತಿರುವುದು ಕಾಣಬಹುದು.
ಜಿಲ್ಲಾಧಿಕಾರಿ ಫೋಟೋ ತಬ್ಬಿಕೊಂಡು ಗೌರವ ಕೊಡುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಚ್ಚಿನ ಡಿಸಿಗೆ ವಿದ್ಯಾರ್ಥಿಗಳ ಅಭಿನಂದನೆಯ ವಿಡಿಯೋ ಭಾರೀ ಹಂಚಿಕೆಯಾಗಿದೆ.ಅಲ್ಲದೇ ಕಿಲಾಡಿ ಮಕ್ಕಳ ಕಿತಾಪತಿ ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.

- Advertisement -
spot_img

Latest News

error: Content is protected !!