Friday, April 26, 2024
Homeಕರಾವಳಿಕಾಸರಗೋಡುಪಾಕಿಸ್ತಾನದ ಮಗುವಿಗೆ ಮರುಜನ್ಮ ನೀಡಿದ ಕೇರಳದ ವೈದ್ಯರು

ಪಾಕಿಸ್ತಾನದ ಮಗುವಿಗೆ ಮರುಜನ್ಮ ನೀಡಿದ ಕೇರಳದ ವೈದ್ಯರು

spot_img
- Advertisement -
- Advertisement -

ಕೇರಳ; ಪಾಕಿಸ್ತಾನದ ಕಂದನಮ್ಮವೊಂದಕ್ಕೆ ಕೇರಳದ ಕೋಯಿಕ್ಕೋಡ್‌ನಲ್ಲಿರುವ ಆಸ್ಟರ್ ಮಿಮ್ಸ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಜೀವದಾನ ಮಾಡಿದ್ದಾರೆ.ತಜ್ಞರು ವೈದ್ಯರೇ ಬದುಕಿಸುವುದು ಕಷ್ಟ ಎಂದು ಕೈಬಿಟ್ಟಿದ್ದ ಮಗುವಿನ ಬಾಳಿಗೆ ಹೊಸ ಭರವಸೆ ಮೂಡಿದೆ.

ಪಾಕಿಸ್ತಾನದ ಬಲೂಚಿಸ್ತಾನ ಮೂಲದ ಜಲಾಲ್ ಮತ್ತು ಸಾಧುರಿ ದಂಪತಿಯ ಪುತ್ರ ಸೈಫ್ ಜಲಾಲ್ ಸಿವಿಯರ್ ಕಂಬೈನ್ಡ್ ಇಮ್ಯುನೊ ಡಿಫಿಷಿಯನ್ಸಿ ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದ. ಬಲೂಚಿಸ್ತಾನ್ ಪ್ರಾಂತ್ಯದ ಬಾಲಕ ಯುಎಇಯಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಉತ್ತರ ಕೇರಳದ ಕೋಝಿಕೋಡ್‌ನಲ್ಲಿರುವ ಆಸ್ಟರ್ ಮಿಮ್ಸ್ ಆಸ್ಪತ್ರೆಯನ್ನು ತಲುಪಿದ್ದಾನೆ.

ಸದ್ಯ ಬಾಲಕನಿಗೆ ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಪರೂಪದ ಅಸ್ಥಿಮಜ್ಜೆ ಬದಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು,ಸಂಪೂರ್ಣ ಚೇತರಿಸಿಕೊಂಡಿದ್ದಾನೆ.

ಆಸ್ಟರ್ ಮಿಮ್ಸ್‌ನ ಹೆಮಟಾಲಜಿಸ್ಟ್ ವೈದ್ಯರ ತಂಡವು ಮಗುವನ್ನು ಸಂಪೂರ್ಣ ತಪಾಸಣೆ ನಡೆಸಿ ಮಗುವಿನ ತಾಯಿಯ ಅಸ್ಥಿ ಮಜ್ಜೆಯು ಮಗುವಿನ ಅಸ್ಥಿಮಜ್ಜೆಗೆ ಪೂರ್ಣ ಹೊಂದಾಣಿಕೆ ಇರುವುದನ್ನು ಕಂಡುಕೊಂಡ್ಡಿದ್ದಾರೆ. ಇದರಿಂದ ತಾಯಿಯ ಅಸ್ಥಿ ಮಜ್ಜೆ ಮಗುವಿಗೆ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.ಇದೀಗ ಶಸ್ತ್ರಚಿಕಿತ್ಸೆಯ ಎರಡು ತಿಂಗಳ ಬಳಿಕ ಮಗು ಸೈಫ್ ಜಲಾಲ್ ಚೇತರಿಸಿಕೊಂಡಿದ್ದಾನೆ.

ಈ ಯಶಸ್ವಿ ಶಸ್ತ್ರ ಚಿಕಿತ್ಸೆ ಬಗ್ಗೆ ಪ್ರತಿಕ್ರಿಯಿಸಿರುವ ಡಾ ಕೇಶವನ್, ಮಗುವಿನ ಅಸ್ಥಿ ಮಜ್ಜೆಯೊಂದಿಗೆ ತಾಯಿ ಅಸ್ಥಿಮಜ್ಜೆ ಸಂಪೂರ್ಣ ಹೊಂದಾಣಿಕೆ ಇತ್ತು.ಆದ್ದರಿಂದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು.ಈಗ ಮಗುವಿಗೆ ಆಮ್ಲಜನಕ ಅಳವಡಿಸಿಲ್ಲ.ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!