
ಕೇರಳ: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಕೇರಳ ಮೂಲದ ನರ್ಸ್ ಒಬ್ಬರು ಸಾವನ್ನಪ್ಪಿದ್ದಾರೆ. ರಂಜಿತಾ ಗೋಪಕುಮಾರನ್ ಮೃತ ನರ್ಸ್ . ಕೇರಳದ ಪತ್ತನಂತಿಟ್ಟ ಜಿಲ್ಲೆಯವರಾದ ರಂಜಿತಾ ಅವರು ಯುನೈಟೆಡ್ ಕಿಂಗ್‌ಡಂನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಊರಿನಲ್ಲಿ ಕನಸಿನ ಮನೆ ಕಟ್ಟುತ್ತಿದ್ದರು. ಹಾಗಾಗಿ ಮನೆ ಕಾಮಗಾರಿ ವೀಕ್ಷಣೆಗೆ ಅಂತಾ ರಜೆ ಮೇಲೆ ಕೇರಳಕ್ಕೆ ಬಂದಿದ್ದರು. ರಜೆ ಮುಗಿಸಿ ವಾಪಸ್ ಲಂಡನ್ ಗೆ ಹೊರಟಿದ್ದಾಗ ದುರಂತ ಸಂಭವಿಸಿದೆ.
ಮಗಳನ್ನು ಕಳೆದುಕೊಂಡು ರಂಜಿತಾ ತಾಯಿ, ಅಮ್ಮನನ್ನು ಕಳೆದುಕೊಂಡ 10 ನೇ ತರಗತಿಯಲ್ಲಿ ಓದುತ್ತಿರುವ ರಂಜಿತಾ ಮಗ ಮತ್ತು 3 ನೇ ತರಗತಿಯಲ್ಲಿ ಓದುತ್ತಿರುವ ಮಗಳು ಸ್ಥಿತಿ ಎಂತಹವರ ಕಣ್ಣುಗಳನ್ನು ತೇವಗೊಳಿಸುತ್ತೆ. ರಂಜಿತಾ ಅವರ ತಾಯಿ ಮತ್ತು ಇಬ್ಬರು ಮಕ್ಕಳು ಮಸ್ಕತ್‌ನಲ್ಲಿ ಅವರೊಂದಿಗೆ ಇದ್ದರು. ಮಕ್ಕಳು ಮಸ್ಕತ್‌ನಲ್ಲಿರುವ ಇಂಡಿಯನ್ ಶಾಲೆಯಲ್ಲಿ ಓದುತ್ತಿದ್ದರು. ರಂಜಿತಾ ಯುಕೆಯಲ್ಲಿ ನರ್ಸ್ ಕೆಲಸ ಸಿಕ್ಕಿ ಹಿನ್ನಲೆ ತನ್ನ ಮಕ್ಕಳು ಮತ್ತು ತಾಯಿಯನ್ನು ಕೇರಳಕ್ಕೆ ವಾಪಾಸ್ ಕಳುಹಿಸಿದ್ದರು.
ರಂಜಿತಾ ಮೂರು ದಿನಗಳ ಹಿಂದೆ ಯುಕೆಯಿಂದ ಮನೆಗೆ ಬಂದಿದ್ದರು. ಅವರಿಗೆ ರಾಜ್ಯ ಆರೋಗ್ಯ ಸೇವೆಯಲ್ಲಿ ನರ್ಸ್ ಕೆಲಸ ಸಿಕ್ಕಿತ್ತು. ಹಾಗಾಗಿ ವಾಪಾಸ್ ಕೇರಳಕ್ಕೆ ಮರಳಿ ರಾಜ್ಯ ಆರೋಗ್ಯ ಸೇವೆಯೊಂದಿಗೆ ಕೆಲಸ ಮಾಡಲು ಪ್ಲ್ಯಾನ್ ಮಾಡುತ್ತಿದ್ದರು. ಅಷ್ಟರಲ್ಲಿ ದುರಂತ ಸಂಭವಿಸಿದೆ.


