Saturday, June 6, 2026
Homeಕರಾವಳಿಕಾಸರಗೋಡುಆಟೋ ಚಾಲಕನನ್ನು 25 ಕೋಟಿಯ ಒಡೆಯನನ್ನಾಗಿಸಿದ ಕೇರಳದ ಓಣಂ ಬಂಪರ್ ಲಾಟರಿ

ಆಟೋ ಚಾಲಕನನ್ನು 25 ಕೋಟಿಯ ಒಡೆಯನನ್ನಾಗಿಸಿದ ಕೇರಳದ ಓಣಂ ಬಂಪರ್ ಲಾಟರಿ

- Advertisement -
- Advertisement -

ಕೇರಳ;  ತಿರುವನಂತಪುರಂನ ಆಟೋ ಚಾಲಕನನ್ನು ಕೇರಳದ ಓಣಂ ಬಂಪರ್ ಲಾಟರಿ ರಾತ್ರಿ ಬೆಳಗಾಗುವಷ್ಟರಲ್ಲಿ 25 ಕೋಟಿಗಳ ಒಡೆಯನನ್ನಾಗಿಸಿದೆ.

ಓಣಂ ಬಂಪರ್ 2022 (BR-87) ಅಥವಾ ತಿರುವೋಣಂ ಬಂಪರ್ ಫಲಿತಾಂಶಗಳನ್ನು ನಿನ್ನೆ ಕೇರಳ ರಾಜ್ಯ ಲಾಟರಿ ಇಲಾಖೆ ಪ್ರಕಟಿಸಿದೆ. ನಿನ್ನೆ  ಮಧ್ಯಾಹ್ನ 2 ಗಂಟೆಗೆ ಘೋಷಿಸಲಾದ ಬಹುಮಾನಗಳಲ್ಲಿ ತಿರುವನಂತಪುರದಲ್ಲಿ ಮಾರಾಟವಾದ ಟಿಕೆಟ್‌ನಲ್ಲಿ 25 ಕೋಟಿ ರೂಪಾಯಿಗಳ ಮೊದಲ ಬಹುಮಾನ ಬಂದಿದೆ.

ಆಟೋ ರಿಕ್ಷಾ ಚಾಲಕ  ಅನೂಪ್(32) ಎಂಬಾತನಿಗೆ    25 ಕೋಟಿ ರೂಪಾಯಿಯ ಮೊದಲ‌ ಬಹುಮಾನ ದೊರೆತಿದೆ. ವಿಜೇತ ಟಿಕೆಟ್ ನ್ನು ತಿರುವನಂತಪುರದ ಪಜವಂಗಡಿ ಭಗವತಿ ಏಜೆನ್ಸಿ ಮಾರಾಟ ಮಾಡಿದೆ.ಇನ್ನು ಎರಡನೇ ಬಹುಮಾನ 5 ಕೋಟಿ ಕೊಟ್ಟಾಯಂ‌ ಜಿಲ್ಲೆಯ ವ್ಯಕ್ತಿಗೆ ಸಿಕ್ಕಿದೆ.

ಅನೂಪ್‌ ಆಟೋ ಚಾಲಕನಾಗಿದ್ದು,ಬಡತನದಿಂದಿ ಬಂದವರಾಗಿದ್ದು,  ಡ್ರಾಗೆ ಒಂದು ದಿನ‌ ಮೊದಲು ಟಿಕೆಟ್ ಖರೀದಿಸಿದ್ದರು ಎನ್ನಲಾಗಿದೆ. ಇದೀಗ ಲಾಟರಿ ಹೊಡೆದು ಅನೂಪ್ ಕೋಟ್ಯಾಧೀಶರಾಗಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ

- Advertisement -

Latest News

error: Content is protected !!