Wednesday, June 3, 2026
Homeಕರಾವಳಿಉಡುಪಿಕಾಪು: ಚಿಕಿತ್ಸೆಗೆ ಆರ್ಥಿಕ ನೆರವಿನ ನೀರಿಕ್ಷೆಯಲ್ಲಿ ಕ್ಯಾನ್ಸರ್ ರೋಗಿ

ಕಾಪು: ಚಿಕಿತ್ಸೆಗೆ ಆರ್ಥಿಕ ನೆರವಿನ ನೀರಿಕ್ಷೆಯಲ್ಲಿ ಕ್ಯಾನ್ಸರ್ ರೋಗಿ

- Advertisement -
- Advertisement -

ಉಡುಪಿ, ಮೇ 13: ಈ ಹಿಂದೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ಕಾಪು ಕರಂದಡಿ ನಿವಾಸಿ ಎಂ.ಅಶ್ರಫ್ (35) ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಇವರ ಚಿಕಿತ್ಸೆಗಾಗಿ ಮತ್ತು ಜೀವನ ನಿರ್ವಹಣೆಗಾಗಿ ದಾನಿಗಳ ಆರ್ಥಿಕ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ತೀರಾ ಬಡ ಕುಟುಂಬ ಇವರದ್ದಾಗಿದ್ದು, ಇವರೇ ಈ ಕುಟುಂಬದ ಆಧಾರ ಸ್ತಂಭವಾಗಿದ್ದರು. ಚಾಲಕರಾಗಿ ದುಡಿಯುತ್ತಿದ್ದ ಇವರಿಗೆ ಕಳೆದ ಜನವರಿಯಲ್ಲಿ ಕ್ಯಾನ್ಸರ್ ಮಾಹಾಮಾರಿ ಇರುವುದು ದೃಢಪಟ್ಟಿತ್ತು. ಇದೀಗ ಅವರು ಆರೋಗ್ಯ ಕ್ಷೀಣಿಸುತ್ತಿದ್ದು, ಎದ್ದು ನಿಂತು ಕೆಲಸ ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಇವರಿಗೆ ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿದ್ದಾರೆ.

ಆದರೆ ಈಗ ದುಡಿಯಲು ಸಾಧ್ಯವಾಗದೆ ಕುಟುಂಬ ನಿರ್ವಹಣೆ ಮತ್ತು ಚಿಕಿತ್ಸೆಗೆ ಆದಾಯ ಇಲ್ಲದೆ ಇಡೀ ಕುಟುಂಬ ಸಂಕಷ್ಟ ಪಡುತ್ತಿದೆ. ಇವರ ಚಿಕಿತ್ಸೆಗೆ ತಿಂಗಳಿಗೆ ಸುಮಾರು 40 ರಿಂದ 50 ಸಾವಿರ ರೂ. ವ್ಯಯವಾಗುತ್ತಿದೆ. ಆದುದರಿಂದ ದಾನಿಗಳು ಇವರ ಚಿಕಿತ್ಸೆ ನೆರವು ನೀಡುವಂತೆ ಮನವಿ ಮಾಡಲಾಗಿದೆ.

ಬ್ಯಾಂಕ್ ಮಾಹಿತಿ
ಎಂ.ಅಶ್ರಫ್ ಕೆ.
ಕೆನರಾ ಬ್ಯಾಂಕ್ ಕಾಪು ಶಾಖೆ
ಖಾತೆ ನಂಬರ್ 2409101008846,
ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ0002409 ಇಲ್ಲಿಗೆ ಹಣ ಕಳುಹಿಸಬಹುದು.
ಇವರ ಮೊಬೈಲ್ ನಂಬರ್- 8970251983.

ಇವರ ವಿಳಾಸ-

ಹೌಸ್ ನಂಬರ್ 029, ಪಂಜಿತ್ತೂರು, ಕರಂದಾಡಿ, ಮಜೂರು ಕಾಪು, ಉಡುಪಿ ತಾಲೂಕು ಮತ್ತು ಜಿಲ್ಲೆ.

- Advertisement -

Latest News

error: Content is protected !!