Tuesday, July 14, 2026
Homeತಾಜಾ ಸುದ್ದಿಗಂಡು ಮಗುವನ್ನು ಬರ ಮಾಡಿಕೊಂಡ ಬಾಲಿವುಡ್ ನ ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿ

ಗಂಡು ಮಗುವನ್ನು ಬರ ಮಾಡಿಕೊಂಡ ಬಾಲಿವುಡ್ ನ ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿ

- Advertisement -
- Advertisement -

ಮುಂಬೈ; ಬಾಲಿವುಡ್ ನ ಖ್ಯಾತ ಜೋಡಿ ಕತ್ರಿಕಾ ಕೈಫ್ ಮತ್ತು ವಿಕ್ಕಿ ಅವರ  ಬದುಕಿನಲ್ಲಿ ಹೊಸ ಅತಿಥಿಯ ಆಗಮನವಾಗಿದೆ. ನಟಿ ಕತ್ರಿಕಾ ಕೈಫ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು 2021 ರಲ್ಲಿ ವಿವಾಹವಾಗಿದ್ದರು. ಇತ್ತೀಚೆಗಷ್ಟೆ ಕತ್ರಿನಾ ಕೈಫ್, ತಾವು ಗರ್ಭಿಣಿ ಆಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ಜೋಡಿಗೆ ಮುದ್ದಾದ ಗಂಡು ಮಗು ಜನಿಸಿದೆ. ಸ್ಟಾರ್ ಜೋಡಿ ಖುಷಿಯನ್ನು ಹಂಚಿಕೊಳ್ಳುತ್ತಿದ್ದಂತೆ ಅನೇಕರು ದಂಪತಿಗೆ ಶುಭಾಶಯ ತಿಳಿಸಿದ್ದಾರೆ.


ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಿಗೆ ಮದುವೆಯಾದ ಕೆಲ ವರ್ಷ ಮಕ್ಕಳಾಗಿರಲಿಲ್ಲ. ಹೀಗಾಗಿ ಕತ್ರಿನಾ ಕೈಫ್ ತಿಂಗಳುಗಳ ಹಿಂದೆ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ಸಂತಾನ ಪ್ರಾಪ್ತಿಗಾಗಿ ಬೇಡಿಕೊಂಡಿದ್ದರು. ಅದಾದ ಕೆಲವೇ ತಿಂಗಳಲ್ಲಿ ಕತ್ರಿನಾ ಕೈಫ್ ಅವರು ತಾವು ಗರ್ಭಿಣಿ ಆಗಿರುವ ಸಂಗತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಇದೀಗ ಈ ದಂಪತಿಗೆ ಗಂಡು ಮಗು ಜನಿಸಿದೆ.

- Advertisement -

Latest News

error: Content is protected !!