Friday, April 26, 2024
Homeಕರಾವಳಿಕಾಸರಗೋಡುಅರ್ಜೆಂಟೀನಾ ತಂಡ ಸೋತಾಗ ಕಣ್ಣೀರು ಹಾಕಿದ ಕಾಸರಗೋಡಿನ ಪುಟಾಣಿಗೆ ಸಿಕ್ಕಿದೆ ಫಿಫಾ ವಿಶ್ವಕಪ್ ನೋಡುವ ಅವಕಾಶ

ಅರ್ಜೆಂಟೀನಾ ತಂಡ ಸೋತಾಗ ಕಣ್ಣೀರು ಹಾಕಿದ ಕಾಸರಗೋಡಿನ ಪುಟಾಣಿಗೆ ಸಿಕ್ಕಿದೆ ಫಿಫಾ ವಿಶ್ವಕಪ್ ನೋಡುವ ಅವಕಾಶ

spot_img
- Advertisement -
- Advertisement -

ಕಾಸರಗೋಡು; ಇತ್ತೀಚೆಗೆ ಅರ್ಜೆಂಟೀನಾ ತಂಡ ಸೋಲು ಕಂಡಾಗ ಕಾಸರಗೋಡಿನ ಪುಟಾಣಿ ಅಭಿಮಾನಿ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಅದೇ ಅಭಿಮಾನಿಗೆ ಕತಾರ್ ಗೆ ತೆರಳಿ ಫಿಫಾ ಪಂದ್ಯವನ್ನು ನೋಡುವ ಅವಕಾಶ ಸಿಕ್ಕಿದೆ‌.

ಮೆಸ್ಸಿಯ ಅರ್ಜೆಂಟೀನಾ ತಂಡ ಸೌದಿಯ ಎದುರು ಸೋತ ಕಾರಣ ಕಾಸರಗೋಡಿನ 13 ವರ್ಷದ ಬಾಲಕ ನಿಬ್ರಾಸ್​ ಕಣ್ಣೀರು ಹಾಕಿದ್ದ.ಈ ಕುರಿತ ವಿಡಿಯೋ ವೈರಲ್ ಆಗಿತ್ತು. ಇದೀಗ ನಿಬ್ರಾಸ್​ಗೆ ಪಯ್ಯನ್ನೂರ್​ ಮೂಲದ ಸ್ಮಾರ್ಟ್​ ಟ್ರಾವೆಲ್​ ಏಜೆನ್ಸಿಯು ಬಾಲಕನಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದ್ದು,ಆತನ ನೆಚ್ಚಿನ ತಂಡದ ಆಟವನ್ನು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಿದೆ‌. ಜೊತೆಗೆ ಅರ್ಜೆಂಟೀನಾ ತಂಡದ ಎಲ್ಲ ಆಟಗಾರರ ಭೇಟಿ ಮಾಡಿಸಲೂ ಏಜೆನ್ಸಿ ಅವಕಾಶ ಮಾಡಿಕೊಟ್ಟಿದೆ.

ಈ ಬಗ್ಗೆ ಮಾತನಾಡಿದ ನಿಬ್ರಾಸ್, ನನ್ನ ಕನಸಿನ ಆಟಗಾರ ಲಿಯೋನೆಲ್​ ಮೆಸ್ಸಿಯನ್ನು ಹತ್ತಿರದಿಂದ ಭೇಟಿಯಾಗುವ ಕನಸು ಈಡೇರುವ ಸಮಯ ಬಂದಿದೆ ಎಂದು ಸಂತಸವನ್ನು‌ ಹಂಚಿಕೊಂಡಿದ್ದಾನೆ.

- Advertisement -
spot_img

Latest News

error: Content is protected !!