- Advertisement -
- Advertisement -
ಕೊರೊನಾ ವೈರಸ್ ನಿಂದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿಯೋರ್ವರು ದುಬೈಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಇದರಿಂದ ಕೊರೊನಾದಿಂದ ಕಾಸರಗೋಡು ಜಿಲ್ಲೆಯೊಬ್ಬರ ಮೊದಲ ಬಲಿಯಾಗಿದೆ.
ಇವರು ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಪ್ಪತ್ತು ದಿನಗಳ ಹಿಂದೆ ಜ್ವರದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆಯಿಂದ ಕೊರೊನಾ ದೃಢಪಟ್ಟಿತ್ತು. ಕಳೆದ ಒಂದು ವಾರದಿಂದ ಇವರ ಸ್ಥಿತಿ ಗಂಭೀರವಾಗಿತ್ತು. ಆದರೆ ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇವರು ದುಬೈನಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ವಾಪಾಸ್ ದುಬೈಗೆ ಹೋಗಿದ್ದರು.
- Advertisement -