Wednesday, June 24, 2026
Homeಕರಾವಳಿಕಾಸರಗೋಡುಮಂಗಳೂರು; ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಕಾಸರಗೋಡಿನ ಯೂಟ್ಯೂಬರ್ ಶಾಲು ಕಿಂಗ್ ಬಂಧನ

ಮಂಗಳೂರು; ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಕಾಸರಗೋಡಿನ ಯೂಟ್ಯೂಬರ್ ಶಾಲು ಕಿಂಗ್ ಬಂಧನ

- Advertisement -
- Advertisement -

ಮಂಗಳೂರು; ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಕಾಸರಗೋಡಿನ ಯೂಟ್ಯೂಬರ್ ಶಾಲು ಕಿಂಗ್ ನನ್ನು ಮಂಗಳೂರು ಏರ್ ಪೋರ್ಟ್ ನಲ್ಲಿ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ನಿವಾಸಿ ಮುಹಮ್ಮದ್ ಸಾಲಿ ಅಲಿಯಾಸ್ ಶಾಲು ಕಿಂಗ್ ಮದುವೆಯಾಗಿ ಮೂವರು ಮಕ್ಕಳಿದ್ದರು ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ಲೈಂಗಿಕ ದೌರ್ಜನ್ಯ ಎಸಗಿದ್ದ.  

ಕಳೆದ ಏಳು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದ ಸಾಲಿ, ಶಾಲು ಕಿಂಗ್ ಮೀಡಿಯಾ, ಶಾಲು ಕಿಂಗ್ ವ್ಲಾಗ್ಸ್ ಮತ್ತು ಶಾಲು ಕಿಂಗ್ ಫ್ಯಾಮಿಲಿ ಸೇರಿದಂತೆ ವಿವಿಧ ಹೆಸರುಗಳಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದಾನೆ.

ಈತನಿಗೆ 2016 ರಲ್ಲಿ ವಿವಾಹವಾದ ಮೂವರು ಮಕ್ಕಳಿದ್ದಾರೆ. ಪತ್ನಿಯಿಂದ ದೂರವಾಗಿದ್ದ ಸಮಯದಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಗೆ ನಾನು ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಈತನ ಮೇಲೆ ಪ್ರಕರಣ ದಾಖಲಾದ ನಂತರ, ಆರೋಪಿ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಕೊಯಿಲಾಂಡಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಆತನನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!