Friday, June 14, 2024
Homeಇತರತಬ್ಲಿಘಿಗಳು ಹೀರೋಗಳು : ಕರ್ನಾಟಕದ ಐಎಎಸ್ ಅಧಿಕಾರಿಯ ವಿವಾದಾತ್ಮಕ ಟ್ವೀಟ್

ತಬ್ಲಿಘಿಗಳು ಹೀರೋಗಳು : ಕರ್ನಾಟಕದ ಐಎಎಸ್ ಅಧಿಕಾರಿಯ ವಿವಾದಾತ್ಮಕ ಟ್ವೀಟ್

spot_img
- Advertisement -
- Advertisement -

ಕೋವಿಡ್ 19 ಇತ್ತ ಇಡೀ ಜಗತ್ತನ್ನೇ ತಲ್ಲಣ ಗೊಳಿಸುತ್ತಿದ್ದರೆ, ಇಲ್ಲೊಬ್ಬ ಕರ್ನಾಟಕದ ಐಎಎಸ್ ಅಧಿಕಾರಿ ದೇಶಾದ್ಯಂತ ಕೊರೊನ ಪ್ರಸಾದ ಹಂಚುವಲ್ಲಿ ಪ್ರಮುಖ ಪಾತ್ರ ಹೊಂದಿರುವ ತಬ್ಲಿಘಿಗಳನ್ನು ಹೀರೋಗಳು ಎಂದು ವಿವಾದಾತ್ಮಕ ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದಾರೆ .

https://twitter.com/mmiask/status/1254680003276500992?s=19


ತಬ್ಲಿಘಿಗಳ ವಿರುದ್ಧ ನೀವೆಲ್ಲ ಆರೋಪಗಳ ಸುರಿಮಳೆ ಮಾಡಿದಿರಿ, ಆದರೆ ಮಾತ್ರ ಅವರು ಪ್ಲಾಸ್ಮಾ ಚಿಕಿತ್ಸೆಗೆ ರಕ್ತ ನೀಡಿ ಹೂಮಳೆ ಸುರಿಸಿದ್ದಾರೆ ಎಂದು ಐಎಎಸ್ ಅಧಿಕಾರಿ ಮಹಮದ್ ಮೊಹಸಿನ್ ಟ್ವೀಟ್ ಮಾಡಿದ್ದಾರೆ.
ಕೊರೊನ ಗುಣಮುಖರ ರಕ್ತವನ್ನು ಸೋಂಕಿತರ ಪ್ಲಾಸ್ಮಾ ಚಿಕಿತ್ಸೆಗೆ ಬಳಸಲಾಗುತ್ತಿದೆ , ಇದಕ್ಕೆ ಕೆಲವು ತಬ್ಲಿಘಿಗಳು ಕೂಡ ರಕ್ತ ನೀಡಿದ್ದಾರೆ , ಇದೇ ವಿಷಯವನ್ನು ಮುಂದಿಟ್ಟುಕ್ಕೊಂಡು ಇವರು ವಿವಾದಾತ್ಮಕ ಟ್ವೀಟ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸದಾ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಳ್ಳುವ ಈ ಅಧಿಕಾರಿ ಹಿಂದೊಮ್ಮೆ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಕಾರನ್ನು ಚೆಕ್ ಮಾಡಿ ಬಹಳ ಪ್ರಚಾರ ಪಡೆದಿದ್ದರು. ಒಂದು ಸಮುಧಾಯವನ್ನು ಓಲೈಸಿಕೊಳ್ಳಲು ಈ ರೀತಿ ನಡೆದುಕೊಳ್ಳುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಹಲವರನ್ನು ಕಾಡಿದೆ .

- Advertisement -
spot_img

Latest News

error: Content is protected !!