Saturday, June 1, 2024
Homeತಾಜಾ ಸುದ್ದಿರಫ್ತು ಸನ್ನದ್ಧತೆ ಶ್ರೇಯಾಂಕ: ಕರ್ನಾಟಕಕ್ಕೆ 3ನೇ ಸ್ಥಾನ

ರಫ್ತು ಸನ್ನದ್ಧತೆ ಶ್ರೇಯಾಂಕ: ಕರ್ನಾಟಕಕ್ಕೆ 3ನೇ ಸ್ಥಾನ

spot_img
- Advertisement -
- Advertisement -

ಬೆಂಗಳೂರು: ನೀತಿ ಆಯೋಗವು 2021ರ ರಫ್ತು ಸನ್ನದ್ಧತೆ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ 3 ನೇ ಸ್ಥಾನ ಪಡೆದುಕೊಂಡಿದೆ. ಈ ಹಿಂದಿನ ರಫ್ತು ಸನ್ನದ್ಧತೆ ಸೂಚ್ಯಂಕದಲ್ಲಿ 9ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 3ನೇ ಸ್ಥಾನಕ್ಕೇರಿದೆ.

ರಫ್ತು ಸನ್ನದ್ಧತೆ ಸೂಚ್ಯಂಕವು ರಾಜ್ಯಗಳ ರಫ್ತು ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಸನ್ನದ್ಧತೆಯನ್ನು ನಿರ್ಣಯಿಸುತ್ತದೆ. ಗುಜರಾತ್, ಮಹಾರಾಷ್ಟ್ರ ಮೊದಲ ಹಾಗೂ ಎರಡನೇ ಸ್ಥಾನಗಳಲ್ಲಿದ್ದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ತಮಿಳುನಾಡು, ಹರಿಯಾಣ ನಂತರದ ಸ್ಥಾನಗಳಲ್ಲಿವೆ.

ಇನ್‌ಸ್ಟಿಟ್ಯೂಟ್ ಆಫ್ ಕಾಂಪಿಟಿಟಿವ್ನೆಸ್‌ ಸಹಭಾಗಿತ್ವದಲ್ಲಿ ಸಿದ್ಧಪಡಿಸಲಾದ ಸೂಚ್ಯಂಕವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇತರೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸೂಚ್ಯಂಕದೊಂದಿಗೆ ಹೋಲಿಸಿಕೊಂಡು ತಮ್ಮ ಕಾರ್ಯಕ್ಷಮತೆಯನ್ನು ತಿಳಿಯಲು ಮಾನದಂಡವಾಗಿಸಲು ಬಳಸಬಹುದು ಎಂದು ನೀತಿ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!