- Advertisement -
![]()
- Advertisement -
ಬೆಳ್ತಂಗಡಿ: ತಾಲೂಕಿನ ಅಳಂಗಡಿ ಗ್ರಾಮದ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವತಿಯಿಂದ ನವರಾತ್ರಿಯ ಅಂಗವಾಗಿ ಕರ್ಣಾರ್ಜುನ ಯಕ್ಷಗಾನ ತಾಳಮದ್ದಳೆಯನ್ನ ಏರ್ಪಡಿಸಲಾಗಿದೆ.
ತಾಳಮದ್ದಳೆ ಕಾರ್ಯಕ್ರಮವನ್ನ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು, ಅಳದಂಗಡಿ ಅರಮನೆಯವರು ಉದ್ಘಾಟಿಸಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತ ಶ್ರೀ ಭರತರಾಜ ಶೆಟ್ಟಿ, ಚೆಂಡೆ ಮದ್ದಳೆಯಲ್ಲಿ ಶ್ರೇಯಸ್ ಪಾಳಂದೆ, ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮಾಸ್ಟರ್ ಕಾರ್ತಿಕ್, ಅರ್ಥದಾರಿಗಳಾಗಿ ಶ್ರೀಗಳಾದ ಜಬ್ಬಾರ್ ಸುಮೋ ಸಂಪಾಜೆ, ಶ್ರೀರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು, ಶ್ರೀ ಸಂಕದಗುಂಡಿ ಗಣಪತಿ ಭಟ್, ಸಂಯೋಜನೆಯನ್ನ ಸಂತೋಷ ಕೇಳ್ಕರ್ ಅವರು ಮಾಡಲಿದ್ದಾರೆ.
ಈ ಕಾರ್ಯಕ್ರಮದ ಯಶಸ್ಸಿಗಾಗಿ ದೇವಸ್ಥಾನ ಆಡಳಿತ ಸಮಿತಿಯ ಪಿ.ಎಚ್. ನಿತ್ಯಾನಂದ ಶೆಟ್ಟಿ ಮತ್ತು ಎ. ರಾಜಶೇಖರ ಶೆಟ್ಟಿ ಆಳದಂಗಡಿ ಅವರು ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.
- Advertisement -


