Wednesday, July 15, 2026
Homeಕರಾವಳಿಉಡುಪಿಕಾರ್ಕಳ : ರಬ್ಬರ್ ಟ್ಯಾಪಿಂಗ್ ಗೆಂದು ಹೋದ ಕೇರಳದ ಕಾರ್ಮಿಕರಿಬ್ಬರು ಓಮ್ನಿ ಕಾರಿನೊಂದಿಗೆ ಪರಾರಿ

ಕಾರ್ಕಳ : ರಬ್ಬರ್ ಟ್ಯಾಪಿಂಗ್ ಗೆಂದು ಹೋದ ಕೇರಳದ ಕಾರ್ಮಿಕರಿಬ್ಬರು ಓಮ್ನಿ ಕಾರಿನೊಂದಿಗೆ ಪರಾರಿ

- Advertisement -
- Advertisement -

ಕಾರ್ಕಳ : ರಬ್ಬರ್ ಟ್ಯಾಪಿಂಗ್ ಗೆಂದು ಹೋದ ಕೇರಳದ ಕಾರ್ಮಿಕರಿಬ್ಬರು ಓಮ್ನಿ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಎಂಬಲ್ಲಿ ನಡೆದಿದೆ. ಕೇರಳ ಮೂಲದ ಸಾಬು .ಕೆ.ಎಸ್(44) ಹಾಗೂ ಮೊಹಮ್ಮದ್ ಅರಾಫತ್(41) ನಾಪತ್ತೆಯಾದವರು.

ಕಡ್ತಲ ಗ್ರಾಮದಲ್ಲಿ ಮಠದಬೆಟ್ಟು ಎಂಬಲ್ಲಿ ರಬ್ಬರ್ ತೋಟ ಹೊಂದಿದ್ದ ರಮೇಶ್ ಕುಮಾರ್ ಎಂಬವರು ವರಂಗದಲ್ಲಿರುವ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುವ ಸಲುವಾಗಿ ಸೋಮವಾರದಂದು ಮುಂಜಾನೆ 4 ಗಂಟೆಗೆ ಎಂಬವರನ್ನು ತನ್ನ ಮಾರುತಿ ಓಮ್ನಿ ಕಾರಿನಲ್ಲಿ ಕಳುಹಿಸಿದ್ದರು. ಆದರೆ ಇಬ್ಬರು ಕಾರ್ಮಿಕರು ಟ್ಯಾಪಿಂಗ್ ಮಾಡದೇ ಕಾರಿನೊಂದಿಗೆ ನಾಪತ್ತೆಯಾಗಿದ್ದಾರೆ. ಈ ಕುರಿತು ರಮೇಶ್ ಕುಮಾರ್ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!