Wednesday, June 3, 2026
Homeಕರಾವಳಿಉಡುಪಿಕಾರ್ಕಳ: ನಿಯಂತ್ರಣ ತಪ್ಪಿ ತೊಡಿಗೆ ಉರುಳಿದ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿಯ ಕಾರು

ಕಾರ್ಕಳ: ನಿಯಂತ್ರಣ ತಪ್ಪಿ ತೊಡಿಗೆ ಉರುಳಿದ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿಯ ಕಾರು

- Advertisement -
- Advertisement -

ಕಾರ್ಕಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಸಮೀಪದ ತೊಡಿಗೆ ಉರುಳಿ ಬಿದ್ದ ಘಟನೆ ನಗರದ ಕಾರ್ಕಳ ತಾಲೂಕಿನ ಆನೆಕೆರೆ ಮಸೀದಿ ಬಳಿ ಇಂದು ಬೆಳಗ್ಗಿನ ಜಾವ ನಡೆದಿದೆ.

ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗೆ ಸೇರಿದ ಕೇರಳ ನೊಂದಾವಣೆಯ ಕಾರು ಇದಾಗಿದ್ದು, ನಿನ್ನೆ ತಡರಾತ್ರಿಯವರೆಗೆ ನಗರದ ಹೊಟೇಲ್ ವೊಂದರ ಮುಂಭಾಗದಲ್ಲಿ ಇದ್ದ ಆ ಕಾರು ಅಲ್ಲಿಂದ ಹೊರಟು ಹೋದ ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿರಬಹುದೆಂದು ಸ್ಥಳೀಯರು ಅಂದಾಜಿಸಿದ್ದಾರೆ.

ಘಟನೆಯಲ್ಲಿ ಅದೃಷ್ಟವಶಾತ್ ಚಾಲಕನಿಗೆ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದರಿಬಹುದೆಂದು ಮೇಲ್ನೋಟಕ್ಕೆ ಕಂಡು ಬಂದರೂ ಚಾಲಕ ಯಾವುದೇ ರೀತಿಯ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸಿ ಅಪಘಾತ ಸಂಭವಿಸಿದೆಯೇ ಎಂದು ತನಿಖೆಯ ಮೂಲಕ ತಿಳಿದು ಬರಬೇಕಷ್ಟೆ.

- Advertisement -

Latest News

error: Content is protected !!