Thursday, June 4, 2026
Homeಕರಾವಳಿಉಡುಪಿಕಾರ್ಕಳ ಅತ್ಯಾಚಾರ ಪ್ರಕರಣ ಪೂರ್ವಯೋಜಿತ ಕೃತ್ಯ: ಶಾಸಕ ಸುನೀಲ್ ಕುಮಾರ್ ಆರೋಪ

ಕಾರ್ಕಳ ಅತ್ಯಾಚಾರ ಪ್ರಕರಣ ಪೂರ್ವಯೋಜಿತ ಕೃತ್ಯ: ಶಾಸಕ ಸುನೀಲ್ ಕುಮಾರ್ ಆರೋಪ

- Advertisement -
- Advertisement -

ಬೆಂಗಳೂರು: ಕಾರ್ಕಳದಲ್ಲಿ ಯುವತಿ ಮೇಲೆ ಅತ್ಯಾಚಾರ ಘಟನೆ ಪೂರ್ವ ಯೋಜಿತ ಕೃತ್ಯ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರಿ‌ನಲ್ಲಿ ಪ್ರತಿಕ್ರಿಯೆ ನೀಡಿದ ಸುನೀಲ್ ಕುಮಾರ್, ಅಮಲು ಬರಿಸುವ ವಸ್ತು ನೀಡಿ ಅತ್ಯಾಚಾರ ಮಾಡಿದ್ದು, ಲವ್ ಜಿಹಾದ್ ನಂತಹ ಪ್ರಕರಣಗಳ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂ ಯುವತಿಯರೂ ಕೂಡಾ ಆಸೆ, ಆಮಿಷಗಳಿಗೆ ಒಳಗಾಗದೇ, ದೂರ ಇರಬೇಕು ಎಂದು ಹೇಳಿರುವ ಶಾಸಕ ಸುನೀಲ್ ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುವ ಜೊತೆಗೆ ಇಂತಹ ಕೃತ್ಯಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಇದೇ ವೇಳೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಬಂದ ನಂತರ ಹಿಂದೂಗಳಿಗೆ ರಕ್ಷಣೆಯೇ ಇಲ್ಲ, ಅತ್ಯಾಚಾರ ಮಾಡುತ್ತಾರೆ, ಇಲ್ಲವೇ ಕೇಸ್ ಮುಚ್ಚಿ ಹಾಕುತ್ತಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಹಾವೇರಿ, ಹುಬ್ಬಳ್ಳಿ ಬಳಿಕ ಈಗ ಕಾರ್ಕಳದಲ್ಲಿ ಆಗಿದ್ದು, ಐವಾನ್ ಡಿಸೋಜಾನೇ ಬಾಂಗ್ಲಾ ದೇಶ ಮಾಡುತ್ತೇನೆ ಅಂತಾ ಹೇಳಿದ್ದಾನೆ, ಇವನ ಮೇಲೂ ಕಾಂಗ್ರೆಸ್ ನವರು ಕ್ರಮ ತೆಗೆದುಕೊಂಡಿಲ್ಲ ಎಂದು ಅಶೋಕ್ ಹೇಳಿದ್ದಾರೆ.

- Advertisement -

Latest News

error: Content is protected !!