Monday, June 8, 2026
Homeತಾಜಾ ಸುದ್ದಿ2ನೇ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್

2ನೇ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್

- Advertisement -
- Advertisement -

ಮುಂಬೈ: ಬಾಲಿವುಡ್ ನಟಿ, ಸೈಫ್ ಅಲಿಖಾನ್ ಪತ್ನಿ ಕರೀನಾ ಕಪೂರ್ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಸೈಫ್ ಅಲಿಖಾನ್ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ.

ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 4:45ರ ಸುಮಾರಿಗೆ ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕರೀನಾ ಮತ್ತು ಸೈಫ್ ಎರಡನೇ ಬಾರಿಗೆ ತಂದೆ ತಾಯಿಯಾದರು. ತಮ್ಮ ಎರಡನೇ ಮಗು ಹುಟ್ಟುವುದಕ್ಕೆ ಮುಂಚೆ ಸೈಫ್ ಮತ್ತು ಕರೀನಾ ತಮ್ಮ ಹಿಂದಿನ ಮನೆಯ ಎದುರು ದೊಡ್ಡ ಮನೆಗೆ ಶಿಫ್ಟ್ ಆಗಿದ್ದಾರೆ. ಈ ಜೋಡಿಗೆ ನಾಲ್ಕು ವರ್ಷದ ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ.

- Advertisement -

Latest News

error: Content is protected !!