Sunday, June 7, 2026
Homeತಾಜಾ ಸುದ್ದಿಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಸಮಯದಲ್ಲಿಯೇ ಮಗುವಿಗೆ ಜನ್ಮ: ಪಾಪುವಿನ ಹೆಸರು ಏನು ಗೊತ್ತೇ..

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಸಮಯದಲ್ಲಿಯೇ ಮಗುವಿಗೆ ಜನ್ಮ: ಪಾಪುವಿನ ಹೆಸರು ಏನು ಗೊತ್ತೇ..

- Advertisement -
- Advertisement -

ಪಾಟ್ನಾ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿಯೇ ಯುವತಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬಿಹಾರದ ಮುಜಾಫರ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಶಾಂತಿ ದೇವಿ ಎಂಬ 20 ವರ್ಷದ ಯುವತಿ ಮಹಾಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಸಮಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ‘ಇಮ್ತಿಹಾನ್’ (ಪರೀಕ್ಷೆ) ಎಂದು ಹೆಸರಿಡಲಾಗಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಶಾಂತಿ ಆರೋಗ್ಯವಾಗಿದ್ದಾಳೆ. ನೋವು ಪ್ರಾರಂಭವಾಗುವ ಮೊದಲು ಆಕೆ ಟಿಕ್ ಮಾದರಿಯ ಪ್ರಶ್ನೆಗಳನ್ನು ಮುಗಿಸಿದ್ದಾಳೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಪತಿ ಬಿರ್ಜು ಸೆಹ್ನಿ ಹೇಳಿದ್ದಾರೆ.

- Advertisement -

Latest News

error: Content is protected !!