Tuesday, April 30, 2024
Homeಕರಾವಳಿಉಡುಪಿಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಲಿದೆ ಕಾಂತಾರ ಸಿನಿಮಾ

ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಲಿದೆ ಕಾಂತಾರ ಸಿನಿಮಾ

spot_img
- Advertisement -
- Advertisement -

ಬೆಂಗಳೂರು: ಬಿಡುಗಡೆಯಾಗಿ ಎರಡು ವಾರ ಕಳೆದರೂ ಇನ್ನೂ ಕಾಂತಾರದ ಆರ್ಭಟ ತಣ್ಣಗಾಗಿಲ್ಲ. ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ಬಾರಿ ಸಿನಿಮಾ ನೋಡುವಷ್ಟು ಕ್ರೇಜ್ ಹುಟ್ಟಿ ಹಾಕಿದೆ ಸಿನಿಮಾ.

ಈಗ ‘ಕಾಂತಾರಾ’ ಅವರ ನಿರೀಕ್ಷೆ ಮೀರಿ ಹಿಟ್ ಆಗಿದೆ. ಬಿಡುಗಡೆಯಾದ ಎರಡು ವಾರಗಳಲ್ಲಿ ದೇಶಾದ್ಯಂತ ಬರೀ ಕನ್ನಡ ಅವತರಣಿಕೆಯೊಂದರಿಂದಲೇ 50 ಪ್ಲಸ್ ಕೋಟಿ ರೂ. ಗಳಿಕೆಯಾಗಿದೆ, ಇದರಲ್ಲಿ ನಿರ್ಮಾಪಕರ ಶೇರ್ 25 ಕೋಟಿ ರೂ.ಗಳಷ್ಟು ಆಗಬಹುದು ಎಂದು ಹೇಳಲಾಗುತ್ತಿದೆ. ಚಿತ್ರ ಬರೀ ಕರ್ನಾಟಕದಲ್ಲಷ್ಟೇ ಅಲ್ಲ. ಬೇರೆ ಬೇರೆ ರಾಜ್ಯಗಳ ಮತ್ತು ದೇಶಗಳ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್​ನಲ್ಲೂ ಬಿಡುಗಡೆಯಾಗಿ ಹೌಸ್​ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ.

ಮುಂಬೈ ಒಂದರಲ್ಲೇ ದಿನಕ್ಕೆ 100 ಪ್ಲಸ್ ಪ್ರದರ್ಶನಗಳಾಗುತ್ತಿವೆಯಂತೆ. ಒಡಿಶಾದಂತಹ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶನಗೊಂಡಿದ್ದು ಕಡಿಮೆಯೇ. ಈಗ ಅಲ್ಲಿಂದಲೂ ಚಿತ್ರ ಪ್ರದರ್ಶನ ಮಾಡುವುದಕ್ಕೆ ಡಿಮ್ಯಾಂಡ್ ಉಂಟಾಗಿದೆ ಎಂದರೆ, ಚಿತ್ರ ಅದೆಷ್ಟರ ಮಟ್ಟಿಗೆ ಸುದ್ದಿ ಮಾಡುತ್ತಿದೆ ಎಂದು ಅರ್ಥವಾಗಬಹುದು. ಇನ್ನು, ಇದು ಕನ್ನಡದ ನೇಟಿವಿಟಿಯ ಚಿತ್ರವಾದ್ದರಿಂದ ಮೊದಲು ಕನ್ನಡ ಅವತರಣಿಕೆಯನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ಬೇಕಾದರೆ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ಓಟಿಟಿಯಲ್ಲಿ ಬಿಡುಗಡೆ ಮಾಡಿದರಾಯಿತು ಎಂಬ ಯೋಚನೆ ಚಿತ್ರತಂಡದವರಿಗೆ ಇತ್ತಂತೆ.

ಯಾವಾಗ ಚಿತ್ರಕ್ಕೆ ಬೇಡಿಕೆ ಹೆಚ್ಚಾಯಿತೋ, ಆಗ ಡಬ್ಬಿಂಗ್ ಕೆಲಸಗಳನ್ನು ತ್ವರಿತಗೊಳಿಸಿ, ಚಿತ್ರವನ್ನು ಬೇರೆ ರಾಜ್ಯಗಳ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ‘ಕಾಂತಾರ’ದ ತೆಲುಗಿನ ಅವತರಣಿಕೆ ಗುರುವಾರ ಬಿಡುಗಡೆಯಾಗಿದೆ. ಇಂದು ಹಿಂದಿ ಚಿತ್ರ ಬಿಡುಗಡೆಯಾಗುತ್ತಿದ್ದು, ನಾಳೆ ತಮಿಳಿನ ‘ಕಾಂತಾರ’ ಬಿಡುಗಡೆಯಾಗಲಿದೆ. ಇನ್ನು, ಮಲಯಾಳಂ ಚಿತ್ರ ಅವತರಣಿಕೆಯನ್ನು ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್ ಬಿಡುಗಡೆ ಮಾಡುತ್ತಿದ್ದಾರೆ.

ಅಲ್ಲಿಗೆ, ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ‘ಕಾಂತಾರ’ ಈಗ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಸದ್ಯಕ್ಕೆ ಕನ್ನಡದ ಅವತರಣಿಕೆಯೊಂದೇ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬೇರೆ ಭಾಷೆಗಳಿಂದ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದು ಮುಂದುವರಿದು ಕಲೆಕ್ಷನ್ ಜೋರಾದರೆ, ಮುಂದಿನ ಕೆಲವೇ ದಿನಗಳಲ್ಲಿ ಚಿತ್ರ 100 ಕೋಟಿ ರೂ.ಗಳತ್ತ ದಾಪುಗಾಲು ಹಾಕಿದರೆ ಆಶ್ಚರ್ಯವಿಲ್ಲ.

- Advertisement -
spot_img

Latest News

error: Content is protected !!