Tuesday, May 21, 2024
Homeತಾಜಾ ಸುದ್ದಿಮದುವೆ ಎಂದರೇನು? ಎಂಬ ಪ್ರಶ್ನೆಗೆ ವಿದ್ಯಾರ್ಥಿ ಬರೆದ ಉತ್ತರ ನೋಡಿ ಅಧ್ಯಾಪಕರು ಸುಸ್ತೋ ಸುಸ್ತು

ಮದುವೆ ಎಂದರೇನು? ಎಂಬ ಪ್ರಶ್ನೆಗೆ ವಿದ್ಯಾರ್ಥಿ ಬರೆದ ಉತ್ತರ ನೋಡಿ ಅಧ್ಯಾಪಕರು ಸುಸ್ತೋ ಸುಸ್ತು

spot_img
- Advertisement -
- Advertisement -

ವದೆಹಲಿ: ಮದುವೆ ಎಂದರೇನು ಎಂದು ಕೇಳಲಾದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಬರೆದಿರುವ ಉತ್ತರದ ಫೋಟೋ ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ವೇಲು ಎಂಬುವರು ಉತ್ತರ ಪತ್ರಿಕೆಯ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ಶೇರ್​ ಆಗುತ್ತಿದೆ.


ಮದುವೆ ಅಂದರೆ ಏನು? ಎಂದು ಕೇಳಲಾದ ಪ್ರಶ್ನೆಗೆ ವಿದ್ಯಾರ್ಥಿ ಬರೆದಿರುವ ಉತ್ತರ ಹೀಗಿದೆ… ನೀವು ದೊಡ್ಡವಳಾಗಿದ್ದೀಯ. ಇನ್ನು ಮುಂದೆ ನಾವು ನಿನಗೆ ಊಟ ಹಾಕಲು ಆಗುವುದಿಲ್ಲ. ಹೀಗಾಗಿ ನೀನು ಒಬ್ಬ ವ್ಯಕ್ತಿಯನ್ನು ಹುಡುಕಿಕೊ ಮತ್ತು ಆತ ನಿನಗೆ ಆಹಾರ ನೀಡಿ, ಪೋಷಿಸಲು ಆರಂಭಿಸುತ್ತಾನೆ ಎಂದು ಹುಡುಗಿಯ ಪಾಲಕರು ಹೇಳುತ್ತಾರೆ. ಅದೇ ರೀತಿ ಹುಡುಗನ ಮನೆಯವರು ಸಹ ನೀನು ದೊಡ್ಡವನಾಗಿದ್ದೀಯಾ, ದಯವಿಟ್ಟು ಮದುವೆ ಆಗು ಎಂದು ಕೇಳಿಕೊಳ್ಳುತ್ತಾರೆ. ಆಗ ಇಬ್ಬರ ಮದುವೆ ಸಂಭವಿಸುತ್ತದೆ. ಇದಾದ ಬಳಿಕ ಹುಡುಗ ಮತ್ತು ಹುಡುಗಿ ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧರಿಸುತ್ತಾರೆ. ಬಳಿಕ ಮಕ್ಕಳನ್ನು ಪಡೆಯಲು ಅವರು ತಪ್ಪು ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಎಂದು ವಿದ್ಯಾರ್ಥಿ ಬರೆದಿದ್ದಾನೆ.

ಸಾಮಾಜಿಕ ಅಧ್ಯಯನ ವಿಭಾಗದಲ್ಲಿ ಈ ಪ್ರಶ್ನೆ ಕೇಳಲಾಗಿದ್ದು, ವಿದ್ಯಾರ್ಥಿ ಬರೆದಿರುವ ಉತ್ತರ ನೋಡಿದ ಶಿಕ್ಷಕ ತಬ್ಬಿಬ್ಬಾಗಿದ್ದು, ವಿದ್ಯಾರ್ಥಿಗೆ 10ಕ್ಕೆ ಸೊನ್ನೆ (0) ಅಂಕಗಳನ್ನು ನೀಡಿ ನಾನ್​​ಸೆನ್ಸ್ ಎಂದು ಉತ್ತರ ಪತ್ರಿಕೆಯ ಮೇಲೆ ಬರೆದಿದ್ದಾರೆ. ಅಲ್ಲದೆ, ನನ್ನನ್ನು ಬಂದು ಕಾಣು ಅಂತಲೂ ಬರೆದಿದ್ದಾರೆ.ಆದರೆ ಈ ಘಟನೆ ಎಲ್ಲಿ ನಡೆದದ್ದು ಎಂಬ ಬಗ್ಗೆ ಮಾಹಿತಿ ಇಲ್ಲ.

- Advertisement -
spot_img

Latest News

error: Content is protected !!