Sunday, June 7, 2026
Homeಕರಾವಳಿಧನಂಜಯ್ ಶರ್ಮ ಜೊತೆ ಗಾಯಕಿ ಅಖಿಲಾ ಪಜಿಮಣ್ಣು ನಿಶ್ಚಿತಾರ್ಥ!

ಧನಂಜಯ್ ಶರ್ಮ ಜೊತೆ ಗಾಯಕಿ ಅಖಿಲಾ ಪಜಿಮಣ್ಣು ನಿಶ್ಚಿತಾರ್ಥ!

- Advertisement -
- Advertisement -

ಪುತ್ತೂರು: ‘ಕನ್ನಡ ಕೋಗಿಲೆ’ ಸೀಸನ್ 1 ಹಾಗೂ 2ರ ರನ್ನರ್‌ಅಪ್ ಆಗಿರುವ ಅಖಿಲಾ ಪಜಿಮಣ್ಣು ಇಂದು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಚೆಲುವೆ ಅಖಿಲಾ ಪಜಿಮಣ್ಣು ಕನ್ನಡದ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವ ಮೂಲಕ ಇಂದು ನಾಡಿನ ಮನೆಮಾತಾಗಿರುವ ಸುಮಧುರ ಕಂಠದ ಗಾಯಕಿ. ಇವರು ಇಂದು ವಿದೇಶಿ ಮೂಲದ ಖಾಸಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಧನಂಜಯ್ ಶರ್ಮ ಎಂಬವರ ಜೊತೆ ಸರಳ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮುಂಜಾನೆ ರಾಗ’ಶೋ ಮೂಲಕ ಅಖಿಲಾ ಪಜಿಮಣ್ಣು ಅವರು ಗಾಯನದ ಜೊತೆಗೆ ನಿರೂಪಣೆಯ ಮೂಲಕ ಅನೇಕ ಅಭಿಮಾನಿಗಳನ್ನು ಸಂಪಾದನೆ ಮಾಡುತ್ತಿದ್ದಾರೆ. ‘ಮುಂಜಾನೆ ರಾಗ’ಶೋನಲ್ಲಿ ಭಕ್ತಿಗೇತೆಗಳು ಪ್ರಸಾರವಾಗಲಿವೆ. ದಿನಕ್ಕೊಂದು ದೇವಸ್ಥಾನದ ದರ್ಶನ ಮಾಡುವುದು. ನಮ್ಮ ರಾಗ, ನಮ್ಮೂರ ದೇವರು, ನಮ್ಮೂರ ತಿಂಡಿ, ನಮ್ಮವರ ಮಾತು, ನಮ್ಮ ಗ್ರಹಗತಿ ಎಂಬ ಅಂಶಗಳು ಇಲ್ಲಿ ಇರಲಿವೆ. ಈ ಮೂಲಕ ಪ್ರೇಕ್ಷಕರ ಬೆಳಗನ್ನು ಸುಂದರವಾಗಿ ಆರಂಭಿಸೋದು ‘ಮುಂಜಾನೆ ರಾಗ’ದ ಆಶಯ.

- Advertisement -

Latest News

error: Content is protected !!