Thursday, June 4, 2026
Homeಕರಾವಳಿಮಂಗಳೂರು: "ನುಡಿಕನ್ನಡ, ಕನ್ನಡೇತರರಿಗೆ ಕನ್ನಡ" ಪಠ್ಯ ಪುಸ್ತಕ ಬಿಡುಗಡೆ

ಮಂಗಳೂರು: “ನುಡಿಕನ್ನಡ, ಕನ್ನಡೇತರರಿಗೆ ಕನ್ನಡ” ಪಠ್ಯ ಪುಸ್ತಕ ಬಿಡುಗಡೆ

- Advertisement -
- Advertisement -

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ‘ನುಡಿಕನ್ನಡ, ಕನ್ನಡೇತರರಿಗೆ ಕನ್ನಡ’ ಪಠ್ಯ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಮಂಗಳೂರು ವಿವಿ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ. ಕೆ ಅವರು ಕೃತಿ ರಚನೆಯ ಅಧ್ಯಯನ ಮಂಡಳಿ ಹಾಗೂ ಸಂಪಾದಕ ಮಂಡಳಿ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ, ಕಾರ್ಯನಿರ್ವಾಹಕ ಸಂಪಾದಕ ಡಾ ಮಾಧವ ಎಂ ಕೆ ಉಪಸ್ತಿತರಿದ್ದರು. ಪ್ರಸಾರಾಂಗದ ನಿರ್ದೇಶಕ ಪ್ರೊ ಸೋಮಣ್ಣ ಸ್ವಾಗತಿಸಿದರು. ಪ್ರೊ ಪ್ರಶಾಂತ್ ನಾಯ್ಕ ವಂದಿಸಿದರು. ಪ್ರಸಾರಾಂಗದ ಸಿಬ್ಬಂದಿ ಭರತ್ ವಿ. ಜೆ ಹಾಗೂ ಜೆಸ್ಸಿ ಮೇರಿ ಡಿ ಸೋಜಾ ಉಪಸ್ಥಿತರಿದ್ದರು.

- Advertisement -

Latest News

error: Content is protected !!