Monday, June 8, 2026
Homeತಾಜಾ ಸುದ್ದಿ16 ಕೆರೆಗಳ ನಿರ್ಮಾತೃ ಮಂಡ್ಯದ ಕಲ್ಮನೆ ಕಾಮೇಗೌಡ ನಿಧನ

16 ಕೆರೆಗಳ ನಿರ್ಮಾತೃ ಮಂಡ್ಯದ ಕಲ್ಮನೆ ಕಾಮೇಗೌಡ ನಿಧನ

- Advertisement -
- Advertisement -

ಮಂಡ್ಯ; 16 ಕೆರೆಗಳ ನಿರ್ಮಾತೃ ಮಂಡ್ಯದ ಕಲ್ಮನೆ ಕಾಮೇಗೌಡ(86) ನಿಧನರಾಗಿದ್ದಾರೆ,  16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಜಿಲ್ಲೆಯ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ (86) ಸೋಮವಾರ (ಅ 17) ಮುಂಜಾನೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಕಾಮೇಗೌಡರ ಕಾಯಕ ಮೆಚ್ಚಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್​ ಕಿ ಬಾತ್​’ನಲ್ಲಿ ಕಾಮೇಗೌಡರನ್ನು ಶ್ಲಾಘಿಸಿದ್ದರು. ಯೋಗ ದಿನಕ್ಕಾಗಿ ಮೈಸೂರಿಗೆ ಬಂದಿದ್ದ ಪ್ರಧಾನಿಯನ್ನು ಭೇಟಿಯಾಗುವ ಆಸೆಯನ್ನು ಕಾಮೇಗೌಡರು ವ್ಯಕ್ತಪಡಿಸಿದ್ದರು. ಆದರೆ ಅನಾರೋಗ್ಯದಿಂದ ಅದು ಸಾಧ್ಯವಾಗಿರಲಿಲ್ಲ. ಇಬ್ಬರು ಮಕ್ಕಳು ಇದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಕಾಮೇಗೌಡರನ್ನು ಗೌರವಿಸಿತ್ತು.

ಮೃತರು ಪತ್ನಿ ಇಬ್ಬರು ಗಂಡು ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಭಿಮಾನಿಗಳನ್ನು ಅಗಲಿದ್ದಾರೆ. ಇವರು ಅಂತರ್ಜಲ ,ಪರಿಸರ ಸಂರಕ್ಷಣೆ ಮಹತ್ವದ ಪಾತ್ರ ವಹಿಸಿದ್ದರು

- Advertisement -

Latest News

error: Content is protected !!