Saturday, June 6, 2026
Homeಕರಾವಳಿಕಲ್ಲಡ್ಕದಲ್ಲಿ ವಾಹನ ಡಿಕ್ಕಿಯಾಗಿ ವಾಲಿದ ವಿದ್ಯುತ್ ಕಂಬ; ಹತ್ತಾರು ಕಿಮೀ ಟ್ರಾಫಿಕ್ ಜಾಮ್

ಕಲ್ಲಡ್ಕದಲ್ಲಿ ವಾಹನ ಡಿಕ್ಕಿಯಾಗಿ ವಾಲಿದ ವಿದ್ಯುತ್ ಕಂಬ; ಹತ್ತಾರು ಕಿಮೀ ಟ್ರಾಫಿಕ್ ಜಾಮ್

- Advertisement -
- Advertisement -

ಕಲ್ಲಡ್ಕ: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಕಲ್ಲಡ್ಕದಲ್ಲಿ ಹೈ ಟೆನ್ಸನ್ ವಿದ್ಯುತ್ ಕಂಬಕ್ಕೆ ಯಾವೂದೋ ವಾಹನ ಅಪಘಾತವಾಗಿ ವಿದ್ಯುತ್ ಕಂಬ ವಾಲಿತ್ತು ಎನ್ನಲಾಗಿದೆ.


ಅವಘಡದಿಂದ ಯಾವೂದೇ ಅಪಾಯ ಸಂಭವಿಸಿಲ್ಲ. ಕೂಡಲೇ ವಾಹನಗಳ ಸಂಚಾರ ತಡೆಹಿಡಿಯಲಾಯಿತು. ಪ್ರಯಾಣಿಕರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ರಸ್ತೆಗೆ ವಾಲಿದ್ದ ವಿದ್ಯುತ್ ತಂತಿ ತೆರವುಗೊಳಿಸಿದರು.


ಬಿ.ಸಿ ರೋಡ್ ಕಡೆಯಿಂದ ಕಲ್ಲಡ್ಕದಿಂದ ನೇತ್ರಾವತಿ ಸೇತುವೆಯವರೆಗೆ ವಾಹನಗಳ ಕ್ಯೂ ನಿಂತಿದ್ದವು. ಇತ್ತ ಕಡೆ ಸೂರಿಕುಮೇರುವರೆಗೆ ವಾಹನಗಳ ಸಾಲು ಇತ್ತು.

- Advertisement -

Latest News

error: Content is protected !!